ಸಾಂದರ್ಭಿಕ ಚಿತ್ರ 
ವಿದೇಶ

ಮದುವೆಯಾಗಿದ್ದ ದಂಪತಿಗೆ ತಾವಿಬ್ಬರು ಅವಳಿ ಮಕ್ಕಳೆಂಬ ಸತ್ಯ ಬಹಿರಂಗ!

ಕಾಲೇಜಿನಲ್ಲಿ ಪ್ರೇಮಿಸಿ ವಿವಾಹವಾಗಿದ್ದ ದಂಪತಿಯನ್ನು ಆಸ್ಪತ್ರೆಯೊಂದರಲ್ಲಿ ಐವಿಎಫ್‌ ಪ್ರಕ್ರಿಯೆಗೆ ಒಳಪಡಿಸಿ ವಂಶವಾಹಿ (ಡಿಎನ್‌ಎ) ಪರೀಕ್ಷೆ ನಡೆಸಿದ ಸಂದರ್ಭ...

ವಾಷಿಂಗ್ಟನ್: ಕಾಲೇಜಿನಲ್ಲಿ ಪ್ರೇಮಿಸಿ ವಿವಾಹವಾಗಿದ್ದ ದಂಪತಿಯ ಡಿಎನ್ಎ ಪರೀಕ್ಷೆ ನಡೆಸಿದಾಗ ಅವರಿಬ್ಬರೂ ಅವಳಿ ಮಕ್ಕಳು ಎಂಬ ವಿಲಕ್ಷಣ ಸತ್ಯ ಬಹಿರಂಗವಾಗಿದೆ.
ಆಸ್ಪತ್ರೆಯೊಂದರಲ್ಲಿ ಐವಿಎಫ್‌ ಪ್ರಕ್ರಿಯೆಗೆ ಒಳಪಡಿಸಲು ದಂಪತಿಯ ವಂಶವಾಹಿ (ಡಿಎನ್‌ಎ) ಪರೀಕ್ಷೆ ನಡೆಸಿದ ಸಂದರ್ಭ ಅವರು ಅವಳಿ ಮಕ್ಕಳು ಎನ್ನುವ ಅಚ್ಚರಿಯ ಅಂಶ ಬಹಿರಂಗಗೊಂಡಿದೆ.
ಐವಿಎಫ್‌ ಚಿಕಿತ್ಸೆಗೆ ಬಂದ ದಂಪತಿಯ ಡಿಎನ್‌ಎ ಮಾದರಿಯಲ್ಲಿ ಏನಾದರೂ ಹೋಲಿಕೆ ಇದೆಯೇ ಎಂದು ಸಾಮಾನ್ಯವಾಗಿ ಪರೀಕ್ಷಿಸುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಇಬ್ಬರ ಡಿಎನ್‌ಎ ಮಾದರಿಗಳಲ್ಲಿ ಸಾಕಷ್ಟು ಹೋಲಿಕೆ ಇರುವುದು ಪ್ರಯೋಗಾಲಯದ ಸಿಬ್ಬಂದಿ ಗಮನಕ್ಕೆ ಬಂದಿದೆ ಎಂದು ಅಮೆರಿಕದ ಮಿಸಿಸಿಪ್ಪಿಯ ಜಾಕ್ಸನ್‌ ಎಂಬಲ್ಲಿನ ಐವಿಎಫ್‌ ಕ್ಲಿನಿಕ್‌ನ ವೈದ್ಯರು ತಿಳಿಸಿದ್ದಾರೆ.
ಮೊದಲಿಗೆ ಅವರಿಬ್ಬರು ಸಂಬಂಧಿಗಳಿರಬೇಕು ಎನಿಸಿತು, ನಂತರ ಅವರ ಹಿನ್ನೆಲೆ ಮತ್ತಿತರ ಅಂಶಗಳನ್ನು ಪರಿಶೀಲಿಸಿದಾಗ ಹಲವು ಹೋಲಿಕೆ ಕಂಡು ಬಂದವು , ಆನಂತರ ಅವರು ಅವಳಿ ಮಕ್ಕಳು ಎಂಬುದು ಖಚಿತವಾಯಿತು ಎಂದು ವೈದ್ಯರು ತಿಳಿಸಿದ್ದಾರೆ. 
ಬಾಲ್ಯದಲ್ಲಿ ಪೋಷಕರು ಮೃತಪಟ್ಟಿದ್ದರಿಂದ ಇವರಿಬ್ಬರನ್ನೂ ಎರಡು ಪ್ರತ್ಯೇಕ ಕುಟುಂಬಗಳು ದತ್ತು ಪಡೆದುಕೊಂಡಿದ್ದವು. ಆದರೆ ಎರಡೂ ಕುಟುಂಬಗಳಿಗೆ ತಾವು ದತ್ತು ಪಡೆದ ಮಗು ಅವಳಿ ಮಕ್ಕಳಲ್ಲಿ ಒಂದು ಎನ್ನುವ ಅಂಶ ತಿಳಿದಿರಲಿಲ್ಲ. 1984ರಲ್ಲಿ ಜನಿಸಿರುವ ಈ ಇಬ್ಬರ ಜನ್ಮ ದಿನಾಂಕವೂ ಒಂದೇ ಆಗಿತ್ತು.  ಜೊತೆಗೆ ನೊಡಲು ಇಬ್ಬರಲ್ಲೂ ಕೆಲ ಹೋಲಿಕೆಗಳು ಒಂದೇ ರೀತಿ ಇದ್ದವು, ಆನೇಕರು ಈ ಸಂಬಂಧ ಹಲವು ಭಾರಿ ಅವರಿಗೆ ಹೇಳಿದ್ದರು, ಆದರೆ ದಂಪತಿ ಅದನ್ನು ತಮಾಷೆಯಾಗಿ ತೆಗೆದುಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT