ವಿದೇಶ

ಪೆರುವಿನಲ್ಲಿ ಪ್ರಬಲ ಭೂಕಂಪನ; ರಿಕ್ಟರ್ ಮಾಪಕದಲ್ಲಿ ಶೇ.6ರಷ್ಟು ತೀವ್ರತೆ ದಾಖಲು

Srinivasamurthy VN

ಲಿಮಾ: ಪೆರುವಿನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಚರ್ ಮಾಪಕದಲ್ಲಿ ಶೇ.6.0ರಷ್ಟು ತೀವ್ರತೆ ದಾಖಲಾಗಿದೆ.

ಉತ್ತರ ಪೆರುವಿನ ಪೆರುವಿಯನ್ ನಗರದ 263 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಈವರೆಗೂ ಯಾವುದೇ ಸಾವು-ನೋವು, ಆಸ್ತಿ ಹಾನಿಯಾದ ಕುರಿತು ವರದಿಯಾಗಿಲ್ಲ. ಅಂತೆಯೇ ಕೊಲಂಬಿಯಾ ಹಾಗೂ ಈಕ್ವೇಡಾರ್ ನಲ್ಲೂ ಭೂಮಿ ಕಂಪಿಸಿದ್ದು, ಈಕ್ವೇಡಾರ್ ರಾಜಧಾನಿ ಕ್ವಿಟೋದಲ್ಲಿ ಜನ ಭಯಭೀತರಾಗಿ ಹೊರಗೆ ಓಡಿ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕಳೆದ ವರ್ಷ ಇದೇ ಈಕ್ವೇಡಾರ್ ನಲ್ಲಿ ಸಂಭವಿಸಿದ 7.8 ತೀವ್ರತೆ ಭೂಕಂಪನದಿಂದಾಗಿ ಬರೊಬ್ಬಿರ 700 ಮಂದಿ ಸಾವಿಗೀಡಾಗಿದ್ದರು. ಇದರ ವರ್ಷಾಚರಣೆ ನಡೆದ ಬೆನ್ನಲ್ಲೇ ಮತ್ತೆ ಭೂಮಿ ಕಂಪಿಸಿರುವುದು ಜನರಲ್ಲಿ ತೀವ್ರ ಆತಂಕ ಸೃಷ್ಟಿಗೆ ಕಾರಣವಾಗಿತ್ತು.

SCROLL FOR NEXT