ವಾಷಿಂಗ್ಟನ್: ವೇತನದ ವಿಚಾರದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಹೆಚ್-1ಬಿ ವೀಸಾಕ್ಕೆ ಬದಲಾವಣೆ ತರಲು ಉದ್ದೇಶಿಸಿರುವುದು ಭಾರತೀಯ ಐಟಿ ಉದ್ಯೋಗಿಗಳಿಗೆ ನೆರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕಾದಲ್ಲಿರುವ ತಾಂತ್ರಿಕ ಕಂಪೆನಿಗಳು ಮತ್ತು ವಾಣಿಜ್ಯ ಹೊರಗುತ್ತಿಗೆ ಸೇವೆಗಳ ಕಾರ್ಮಿಕ ವೆಚ್ಚ ಹೊಸ ಹೆಚ್-1ಬಿ ವೀಸಾ ನೀತಿಯಿಂದ ಹೆಚ್ಚಳವಾಗಲಿದೆ ಎಂದು ಬನ್ಯನ್ ಟ್ರೀ ಕ್ಯಾಪಿಟಲ್ ಮ್ಯಾನೇಜ್ ಮೆಂಟ್ ಸ್ಥಾಪಕ ಮತ್ತು ವ್ಯವಸ್ಥಾಪಕ ಪಾಲುದಾರ ಇಗ್ನಾಟಿಯಸ್ ಚಿತೆಲೆನ್ ತಿಳಿಸಿದ್ದಾರೆ.
ಈ ಹೆಚ್ಚಿನ ವೆಚ್ಚ ಅಮೆರಿಕನ್ ಡಾಲರ್ 2.6 ಶತಕೋಟಿ ಡಾಲರ್ ನಷ್ಟು ವರ್ಷಕ್ಕೆ ಆಗಲಿದೆ. ವೀಸಾ ಹೊಂದಿರುವವರಿಗೆ ವಾರ್ಷಿಕ ವೇತನದಲ್ಲಿ 1,00,000 ಅಮೆರಿಕನ್ ಡಾಲರ್ ನಷ್ಟಾಗಲಿದೆ. ಇದು ಪ್ರಮುಖ ಕಂಪೆನಿಗಳಿಗೆ ಅನ್ವಯವಾಗಲಿದೆ. ಹೊಸ ವೀಸಾ ನೀತಿ ಮುಂದಿನ ನವೆಂಬರ್ ಗೆ ಘೋಷಣೆಯಾಗುವ ನಿರೀಕ್ಷೆಯಿದೆ ಎಂದು ಚಿತೆಲೆನ್ ತಿಳಿಸಿದರು.
2018ರ ವೇಳೆಗೆ ಹೆಚ್ -1 ಬಿ ವೀಸಾ ನಿಯಮ ಜಾರಿಗೆ ಬಂದರೆ ಅದನ್ನು ಅತಿ ಹೆಚ್ಚು ವೇತನ ಮತ್ತು ಕೌಶಲ್ಯಭರಿತ ವೃತ್ತಿಪರರಿಗೆ ನೀಡಲಾಗುತ್ತದೆ. ಅಮೆರಿಕದಲ್ಲಿ ಉತ್ತಮ ಪದವಿ ಪಡೆದವರು ಮತ್ತು ಭಾರತದಲ್ಲಿ ಅತಿ ಹೆಚ್ಚಿನ ಕೌಶಲ್ಯ ವೃತ್ತಿಯಲ್ಲಿರುವವರು ಹೆಚ್-1ಬಿ ವೀಸಾಕ್ಕೆ ಅರ್ಜಿ ಸಲ್ಲಿಸುತ್ತಾರೆ. ಇಂತವರಿಗೆ ಅಮೆರಿಕಾದಲ್ಲಿ ಇನ್ನು ಮುಂದೆ ಇನ್ನೂ ಉತ್ತಮ ನೌಕರಿ ಸಿಕ್ಕಿ ವೇತನ ಹೆಚ್ಚಳವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.