ವಿದೇಶ

ನಮಗೂ ಗೌರವ ನೀಡಿ: ಅಮೆರಿಕ ರಾಯಭಾರಿಗೆ ಪಾಕ್ ಸೇನಾ ಮುಖ್ಯಸ್ಥರ ಅಳಲು

Vishwanath S
ಇಸ್ಲಾಮಾಬಾದ್: ಪಾಕಿಸ್ತಾನವು ಅಮೆರಿಕದಿಂದ ಹಣಕಾಸಿನ ನೆರವನ್ನು ಕೇಳುತ್ತಿಲ್ಲ. ಆದರೆ ನಮಗೂ ಗೌರವ ನೀಡಿ ಎಂದು ಅಮೆರಿಕ ರಾಯಭಾರಿಗೆ ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಖಮರ್ ಜಾವೆದ್ ಬಾಜ್ವಾ ಅಲವತ್ತುಕೊಂಡಿದ್ದಾರೆ. 
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊನ್ನೆಯಷ್ಟೇ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದರು. ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಪಾಕಿಸ್ತಾನ ಕೂಡಲೇ ನಿಲ್ಲಿಸದೇ ಹೋದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿಕ್ಕೆ ಪಾಕಿಸ್ತಾನ ಸೇನಾ ಮುಖ್ಯಸ್ಥರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. 
ಡೊನಾಲ್ಡ್ ಟ್ರಂಪ್ ಘೋಷಿಸಿದ್ದ ದಕ್ಷಿಣ ಏಷ್ಯಾ ಕಡೆಗಿನ ಪರಿಷ್ಕೃತ ರಕ್ಷಣಾ ನೀತಿ ಕುರಿತು ವಿವರಿಸಲು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿನ ಸೇನಾ ಕೇಂದ್ರ ಕಚೇರಿಯಲ್ಲಿ ಅಮೆರಿಕದ ರಾಯಭಾರಿ ಡೇವಿಡ್ ಹಾಲೇ ಅವರು ಜನರಲ್ ಖಮರ್ ಜಾವೆದ್ ಬಾಜ್ವಾ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಜನರಲ್ ಖಮರ್ ಜಾವೆದ್ ಬಾಜ್ವಾ ಅವರು ಈ ರೀತಿ ಹೇಳಿದ್ದಾರೆ. 
ಪಾಕಿಸ್ತಾನ ಉಗ್ರರ ಸ್ವರ್ಗವಾಗಿ ಮಾರ್ಪಟ್ಟಿದ್ದು,  ದಕ್ಷಿಣ ಏಷ್ಯಾದಲ್ಲಿ ಸಂಭವಿಸುವ ಯಾವುದೇ ಉಗ್ರ ದಾಳಿಗೂ ಪಾಕಿಸ್ತಾನದ ನಂಟು ಇರುತ್ತದೆ. ಹೀಗಾಗಿ ಪಾಕಿಸ್ತಾನ ತನ್ನ ನೆಲದಲ್ಲಿನ ಉಗ್ರ ಚಟುವಟಿಕೆಯನ್ನು ಕೂಡಲೇ ಮಟ್ಟ ಹಾಕಬೇಕು ಡೊನಾಲ್ಡ್ ಟ್ರಂಪ್ ಹೇಳಿದ್ದರು. 
SCROLL FOR NEXT