ಸಂಗ್ರಹ ಚಿತ್ರ 
ವಿದೇಶ

ಡೊಕ್ಲಾಂ ನಲ್ಲಿ ಚೀನಾ ಕ್ಯಾತೆ; ವಿವಾದಿತ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಸೇನೆ ನಿಯೋಜನೆ

ಭಾರತ ಮತ್ತು ಚೀನಾ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದ್ದ ಡೊಕ್ಲಾಂ ಗಡಿ ವಿವಾದಕ್ಕೆ ಮತ್ತೇ ಡ್ರಾಗನ್ ಸೇನೆ ತುಪ್ಪ ಸುರಿಯುವ ಕೆಲಸ ಮಾಡಿದ್ದು, ವಿವಾದಿತ ಗಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸೇನೆ ನಿಯೋಜಿಸಿದೆ ಎಂದು ತಿಳಿದುಬಂದಿದೆ.

ಬೀಜಿಂಗ್: ಭಾರತ ಮತ್ತು ಚೀನಾ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದ್ದ ಡೊಕ್ಲಾಂ ಗಡಿ ವಿವಾದಕ್ಕೆ ಮತ್ತೇ ಡ್ರಾಗನ್ ಸೇನೆ ತುಪ್ಪ ಸುರಿಯುವ ಕೆಲಸ ಮಾಡಿದ್ದು, ವಿವಾದಿತ ಗಡಿಯಲ್ಲಿ ದೊಡ್ಡ  ಪ್ರಮಾಣದಲ್ಲಿ ಸೇನೆ  ನಿಯೋಜಿಸಿದೆ ಎಂದು ತಿಳಿದುಬಂದಿದೆ.
ಸೇನಾ ಮೂಲಗಳ ಪ್ರಕಾರ ವಿವಾದಿತ ಡೊಕ್ಲಾಂ ಗಡಿ ಪ್ರದೇಶದಲ್ಲಿ ಚೀನಾದ ಸುಮಾರು 1600ರಿಂದ 1800 ಸೈನಿಕರು ಶಾಶ್ವತ ಶಿಬಿರಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದು, ಅದರ ಮೂಲಕವೇ ಕಾರ್ಯ ನಿರ್ವಹಿಸಲಿದ್ದಾರೆ ಎಂದು  ಹೇಳಲಾಗಿದೆ.
ಈ ಹಿಂದೆಯೇ ಚೀನಾ ರಕ್ಷಣಾ ಇಲಾಖೆಯ ವಕ್ತಾರ ಕ.ವೂ. ಖಿಯಾನ್ ಅವರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿ,  'ಡೋಕ್ಲಾಂ ಚೀನಾದ್ದು. ಈ ಕಾರಣದಿಂದ ಇಲ್ಲಿ ಸೇನೆಯನ್ನು ನಿಯೋಜಿಸಿದ್ದೇವೆ. ಚಳಿಗಾಲದ ಸಂದರ್ಭದಲ್ಲಿ  ಮತ್ತಷ್ಟು ಸೇನೆ  ನಿಯೋಜಿಸುತ್ತೇವೆ ಎಂದು ಹೇಳುವ ಮೂಲಕ ಮತ್ತೆ ವಿವಾದವನ್ನು ಕೆದಕಿದ್ದರು. ಇದೀಗ ಇದಕ್ಕೆ ಇಂಬು ನೀಡುವಂತೆ ಈಗಾಗಲೇ ವಿವಾದಿತ ಪ್ರದೇಶದಲ್ಲಿ ಚೀನಾದ ಸುಮಾರು 1600 ರಿಂದ 1800 ಸೈನಿಕರು  ನಿಯೋಜನೆಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸೇನಾ ಮೂಲಗಳ ಪ್ರಕಾರ ಸಿಕ್ಕಿಂ-ಭೂತಾನ್ ಮತ್ತು ಟಿಬೆಟ್ ಗೆ ಅಂಟಿಕೊಂಡಿರುವ ಡೊಕ್ಲಾಂ ಪ್ರದೇಶದಲ್ಲಿ ಚೀನಾ ಸೇನೆ ಒಟ್ಟು 2 ಸೇನಾ ಹೆಲಿಪಾಡ್ ಗಳನ್ನು ನಿರ್ಮಾಣ ಮಾಡಿದೆ. ಅಲ್ಲದೆ ಮೂರು ರಸ್ತೆಗಳನ್ನು ಆಧುನೀಕರಿಸಿದ್ದು,  ಬಂಕರ್ ಗಳನ್ನು ಉನ್ನತೀಕರಿಸಿದೆ. ಇದಲ್ಲದೆ ಆಯಕಟ್ಟಿನ ಪ್ರದೇಶಗಳಲ್ಲಿ ತಾತ್ಕಾಲಿಕ ಶೆಲ್ಟರ್ ಗಳು, ಶೆಡ್ ಗಳನ್ನು ನಿರ್ಮಾಣ ಮಾಡಿದೆ ಎನ್ನಲಾಗಿದೆ.
ಈ ಹಿಂದೆ ಉಭಯ ದೇಶಗಳ ಸಂಧಾನ ಮಾತುಕತೆ ಮೇರೆಗೆ, ಈ ಭಾಗದಲ್ಲಿ ನಿಯೋಜಿಸಿದ್ದ ಸೇನೆಯನ್ನು ಚೀನಾ ಮತ್ತು ಭಾರತ ದೇಶಗಳು ವಾಪಸ್ ಕರೆಸಿಕೊಂಡಿತ್ತು. ಇದಕ್ಕೂ ಮೊದಲು ಈ ಭಾಗದಲ್ಲಿ ಭಾರತ ಮತ್ತು ಚೀನಾ   ಸೈನಿಕರು ಪರಸ್ಪರ ವಾಗ್ವಾದ ನಡೆಸಿದ್ದರಲ್ಲದೇ ಕೈಕೈ ಮಿಲಾಯಿಸಿದ್ದರು. ಭಾರತೀಯ ಸೈನಿಕರನ್ನು ಗುರಿಯಾಗಿಸಿಕೊಂಡು ಚೀನಾ ಸೈನಿಕರು ಕಲ್ಲು ತೂರಾಟ ಕೂಡ ಮಾಡಿದ್ದರು. ಸುಮಾರು 73 ದಿನಗಳ ಕಾಲ ಹಗ್ಗ ಜಗ್ಗಾಟ ನಡೆದು,   ನಂತರ ಈಶಾನ್ಯ ಭಾಗದೊಂದಿಗೆ ಭಾರತವನ್ನು ಸೇರಿಸುವ ಭಾಗದಲ್ಲಿ ನಿಯೋಜಿಸಿದ್ದ ಸೇನೆಯನ್ನು ಚೀನಾ ಆಗಸ್ಟ್ 28ರಂದು ಹಿಂಪಡೆದಿತ್ತು. ಈ ಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೂಡ   ಸ್ಥಗಿತಗೊಳಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT