ವಿದೇಶ

ಭಾರತದ ಲಕ್ಷ್ಮೀ ಪುರಿ ಸೇರಿ 6 ರಾಜತಾಂತ್ರಿಕರಿಗೆ ವಿಶ್ವಸಂಸ್ಥೆ 'ಪವರ್ ಆಫ್ ಒನ್' ಪ್ರಶಸ್ತಿ

Raghavendra Adiga
ನ್ಯೂಯಾರ್ಕ್: ಬಾರತದ ಲಕ್ಷ್ಮೀ ಪುರಿ ಸೇರಿದಂತೆ ಆರು ಉನ್ನತ ರಾಜತಾಂತ್ರಿಕರಿಗೆ ವಿಶ್ವಸಂಸ್ಥೆ ದಿವಾಳಿ ಪವರ್ ಆಫ್ ಒನ್ (ದೀಪಾವಳಿ ಏಕ ಶಕ್ತಿ) ಪ್ರಶಸ್ತಿ ನೀಡಿ ಗೌರವಿಸಿದೆ. ವಿಶ್ವದಲ್ಲಿ ಶಾಂತಿ ಮತ್ತು ಭದ್ರತೆ ನೆಲೆಗೊಳ್ಳಲು ನೀಡಿದ ಸೇವೆಯನ್ನು ಪರಿಗಣಿಸಿ ಇದೇ ಪ್ರಪ್ರಥಮ ಬಾರಿಗೆ ಈ ಪುರಸ್ಕಾರ ನೀಡಲಾಗಿದೆ.  ನ್ಯೂಯಾರ್ಕ್‍ನ ವಿಶ್ವಸಂಸ್ಥೆ ಕೇಂದ್ರ ಕಛೇರಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ವಿಶ್ವಸಂಸ್ಥೆಯ ಮಹಿಳಾ ವಿಭಾಗದ ಮುಖ್ಯಸ್ಥೆ ಲಕ್ಷ್ಮೀ ಪುರಿ, ಲೆಬನಾನ್ ರಾಯಭಾರಿ ನವಾಜ್ ಸಲಾಂ, ಉಕ್ರೇನ್‍ನ ಯುರಿ ಸೆರ್‍ಗೆವೆವ್, ವಿಶ್ವಸಂಸ್ಥೆಗೆ ಬ್ರಿಟಿಷ್ ರಾಯಭಾರಿ ಮ್ಯಾಥ್ಯೂ ರೇಕ್ರೋಫ್ಟ್,  ಹಿರಿಯ ರಾಜತಾಂತ್ರಿಕರಾದ ಈಜಿಪ್ಟ್‍ನ ಮಗೆಡ್ ಅಬ್ದುಲ್ ಅಜಿಜ್, ಮೋಲ್ಡಾವಾದ ಇಯಾನ್ ಬೊಟ್‍ನರು ಅವರುಗಳಿಗೆ ಈ ಪ್ರಶಸ್ತಿ ಸಂದಿದೆ. 
ಕಲೇದ ವರ್ಷ ಅಮೆರಿಕ ಅಂಚೆ ಸೇವೆಗಳ ಇಲಾಖೆ ದೀಪಾವಳಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದ್ದು ಈ ಸಂಭ್ರಮಾಚರಣೆಯ ವರ್ಷಾಚರಣೆಯ ಸಮಯ ಈ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜನೆಯಾಗಿತ್ತು.
SCROLL FOR NEXT