ವಿದೇಶ

ಪಾಕಿಸ್ತಾನದಿಂದ 145 ಭಾರತೀಯ ಮೀನುಗಾರರ ಬಿಡುಗಡೆ

Lingaraj Badiger
ಇಸ್ಲಾಮಾಬಾದ್‌: ಅಕ್ರಮವಾಗಿ ಜಲಗಡಿಯಾಚೆ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿತರಾಗಿದ್ದ 145 ಭಾರತೀಯ ಮೀನುಗಾರರನ್ನು ಮಾನವೀಯತೆ ಆಧಾರದ ಮೇಲೆ ಶುಕ್ರವಾರ ಪಾಕಿಸ್ತಾನದ ಬಿಡುಗಡೆ ಮಾಡಿದೆ.
ಬಿಗಿ ಭದ್ರತೆಯ ನಡುವೆ ಕರಾಚಿ ರೈಲ್ವೆ ನಿಲ್ದಾಣಕ್ಕೆ ಬಂದ ಮೀನುಗಾರರು, ಅಲ್ಲಿಂದ ಲಾಹೋರ್‌ಗೆ ತೆರಳಲಿದ್ದಾರೆ. ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳ ಸಮ್ಮುಖದಲ್ಲಿ ಅವರನ್ನು ಸ್ವದೇಶಕ್ಕೆ ಕಳುಹಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪಾಕ್‌ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವಾರವಷ್ಟೇ ಪಾಕ್‌, ಭಾರತದ 291 ಮೀನುಗಾರರನ್ನು ಎರಡು ಹಂತಗಳಲ್ಲಿ ಬಿಡುಗಡೆಗೊಳಿಸುವುದಾಗಿ ಹೇಳಿತ್ತು. ಜ.8ರಂದು ಉಳಿದ 146 ಮೀನುಗಾರರ ಬಿಡುಗಡೆ ಸಾಧ್ಯತೆ ಇದೆ.
ಅರೇಬಿಯನ್‌ ಸಮುದ್ರದಲ್ಲಿ ಉಭಯ ದೇಶಗಳ ಗಡಿಯನ್ನು ಸ್ಪಷ್ಟವಾಗಿ ಗುರುತಿಸಿಲ್ಲದ ಕಾರಣ ಹಾಗೂ ಮೀನುಗಾರರ ಬಳಿ ಉತ್ತಮ ತಂತ್ರಜ್ಞಾನದ ದೋಣಿಗಳಿರದ ಕಾರಣ ಎರಡೂ ದೇಶಗಳ ಮೀನುಗಾರರು ಆಗಾಗ್ಗೆ ಮೀನುಗಾರಿಕೆಗಾಗಿ ಗಡಿ ದಾಟಿ ಬಂಧನಕ್ಕೀಡಾಗುವುದು ಸಾಮಾನ್ಯವಾಗಿದೆ.
SCROLL FOR NEXT