ಕುವೈತ್: ಪಾಕಿಸ್ತಾನ, ಸಿರಿಯಾ, ಇರಾಕ್, ಆಫ್ಘಾನಿಸ್ಥಾನ ಮತ್ತು ಇರಾನ್ ರಾಷ್ಟ್ರಗಳ ನಾಗರಿಕರಿಗೆ ವೀಸಾ ನೀಡುವುದನ್ನು ಕುವೈತ್ ನಿಷೇಧಿಸಿದೆ.
ಕಳೆದ ಶುಕ್ರವಾರ ಏಳು ಪ್ರಮುಖ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಿಂದ ವಲಸೆ ನಿಷೇಧಿಸಿ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ ಮೇಲೆ, ಈಗ ಕುವೈತಿ ಸರ್ಕಾರ ಐದು ನಿಷೇಧಿತ ರಾಷ್ಟ್ರಗಳ ನಾಗರಿಕರಿಗೆ ವೀಸಾ ನಿಷೇಧಿಸಿದೆ. ಇದು ಇಸ್ಲಾಮಿಕ್ ಉಗ್ರಗಾಮಿಗಳು ವಸಲೆ ಬರುವುದನ್ನು ತಡೆಯುವ ಕ್ರಮವಾಗಿದೆ ಎಂದು ಸ್ಪಟನಿಕ್ ಇಂಟರ್ನ್ಯಾಷನಲ್ ವರದಿ ಮಾಡಿದೆ.
ಟ್ರಂಪ್ ಸಹಿ ಮಾಡಿರುವ ಆದೇಶದ ಪ್ರಕಾರ ೧೨೦ ದಿನಗಳ ಕಾಲ ವಿಶ್ವದ ಎಲ್ಲ ರಾಷ್ಟ್ರಗಳಿಂದ ನಿರಾಶ್ರಿತರು ಅಮೆರಿಕಾಗೆ ವಲಸೆ ಬರುವುದನ್ನು ನಿಷೇಧಿಸಲಾಗಿದ್ದು, "ಭಯೋತ್ಪಾದಕ ಕಳವಳ ಸೃಷ್ಟಿಸುವ ದೇಶಗಳಿಂದ" ವಲಸೆಯನ್ನು ೯೦ ದಿನಗಳ ಕಾಲ ವಜಾ ಮಾಡಲಾಗಿದೆ. ಅಮೆರಿಕಾ ನಿಷೇಧಕ್ಕೆ ಒಳಪಟ್ಟಿರುವ ದೇಶಗಳು ಇರಾಕ್, ಸಿರಿಯಾ, ಇರಾನ್, ಸುಡಾನ್, ಲಿಬಿಯಾ, ಸೋಮಾಲಿಯಾ ಮತ್ತು ಯೆಮೆನ್.
ಟ್ರಂಪ್ ಆದೇಶಕ್ಕೂ ಮುಂಚಿತವಾಗಿ ಸಿರಿಯಾ ನಾಗರೀಕರಿರು ದೇಶಕ್ಕೆ ಬರದಂತೆ ನಿರ್ಬಂಧ ಹಾಕಿದ್ದ ಒಂದೇ ದೇಶ ಕುವೈತ್. ೨೦೧೧ ರಲ್ಲೇ ಎಲ್ಲ ಸಿರಿಯನ್ ನಾಗರಿಕರ ವೀಸಾಗಳನ್ನು ಕುವೈತ್ ನಗರ ವಜಾಗೊಳಿಸಿತ್ತು.
ಭಯೋತ್ಪಾದಕರ ಗುಂಪೊಂದು ೨೦೧೫ ರಲ್ಲಿ ಶಿಯಾ ಮಸೀದಿಯೊಂದರ ಮೇಲೆ ದಾಳಿ ನಡೆಸಿ ೨೭ ಕುವೈತ್ ನಾಗರಿಕರ ಸಾವಿಗೆ ಕಾರಣವಾಗಿತ್ತು. ಕಠಿಣ ಸಾಂಸ್ಕೃತಿಕ ನಿಯಮಗಳನ್ನು ಹೊಂದಿರುವುದರಿಂದ ವಲಸಿಗರಿಗೆ ವಾಸಿಸಲು ಕುವೈತ್ ಅತಿ ಕೆಟ್ಟ ನಗರ ಎಂದು ೨೦೧೬ ರ ಒಂದು ಸಮೀಕ್ಷೆ ತಿಳಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos