ವಿದೇಶ

ಮರುಬಳಕೆ ಮೊಬೈಲ್ ಫೋನ್ ಗಳಿಂದ ಟೋಕಿಯೊ 2020 ಒಲಿಂಪಿಕ್ ಪದಕಗಳ ತಯಾರು

Sumana Upadhyaya
ವಾಷಿಂಗ್ಟನ್:  ಪಂದ್ಯಗಳಲ್ಲಿ ಗೆದ್ದ ಕ್ರೀಡಾಪಟುಗಳಿಗೆ ನೀಡುವ ಪ್ರಶಸ್ತಿಯನ್ನು ಮರುಬಳಕೆ ಮೊಬೈಲ್ ಫೋನ್ ನಿಂದ ತಯಾರಿಸುತ್ತಿದ್ದಾರೆ. ಸಂರಕ್ಷಣೆಯನ್ನು ಪ್ರಚುರಪಡಿಸುವ ಉದ್ದೇಶದಿಂದ ಮಾತ್ರವಲ್ಲದೆ ವೆಚ್ಚ ಉಳಿತಾಯ ಮಾಡಲು ಆಯೋಜಕರು ಈ ಕ್ರಮ ಕೈಗೊಂಡಿದ್ದಾರೆ.
ಒಲಂಪಿಕ್ ಮತ್ತು ಪಾರಾ ಒಲಂಪಿಕ್ ನಲ್ಲಿ ಸಾಮಾನ್ಯವಾಗಿ ಗೆದ್ದ ಕ್ರೀಡಾಪಟುಗಳಿಗೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ನೀಡಲಾಗುತ್ತದೆ. ಆದರೆ ತಂತ್ರಜ್ಞಾನ ಸುಧಾರಣೆಯಾಗುತ್ತಿದ್ದಂತೆ ಹಳೆಯ ಅನುಪಯುಕ್ತ ಮೊಬೈಲ್ ಗಳನ್ನು ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಟ್ಟು ಅವುಗಳಿಂದ 5,000 ಪದಕಗಳನ್ನು ತಯಾರಿಸಲು ದಾನ ನೀಡಲು ಆಯೋಜಕರು ಮುಂದಾಗಿದ್ದಾರೆ. ಇದಕ್ಕಾಗಿ ಜಪಾನೀಯರ ಬಳಿ ಹಳೆಯ ವಿದ್ಯುತ್ ಉಪಕರಣಗಳನ್ನು ನೀಡುವಂತೆ ಹೇಳಿದ್ದಾರೆ.
ಈ ಹಿಂದಿನ ರಿಯೊ ಒಲಂಪಿಕ್ಸ್ ನಲ್ಲಿ ಶೇಕಡಾ 30ರಷ್ಟು ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಮರುಬಳಕೆ ವಸ್ತುಗಳಿಂದ ತಯಾರಿಸಲಾಗಿತ್ತು.
SCROLL FOR NEXT