ಪ್ಯಾರಿಸ್: ಪ್ಯಾರಿಸ್ ನ ಲವ್ರೇ ಮ್ಯೂಸಿಯಂ ಬಳಿ ಚೂರಿ ಹಿಡಿದು ಅಲ್ಲಾಹು ಅಕ್ಬರ್ ಎಂದು ಕೂಗಿ ಚೂರಿಯಿಂದ ದಾಳಿ ನಡೆಸಿದ್ದ ವ್ಯಕ್ತಿಯನ್ನು ಯೋಧರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಶುಕ್ರವಾರ ಬೆಳಗ್ಗೆ ವ್ಯಕ್ತಿಯೊರ್ವ ಅಲ್ಲಾಹು ಅಕ್ಬರ್ ಎಂದು ಕೂಗಿ ಅನಧಿಕೃತವಾಗಿ ಮ್ಯೂಸಿಯಂ ಪ್ರವೇಶಿಸಲು ಮುಂದಾದಾಗ ಯೋಧ ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಗುಂಡೇಟು ತಿಂದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮ್ಯೂಸಿಯಂಗೆ ತೆರಳಲು ಬಂದಿದ್ದ ವ್ಯಕ್ತಿ ಬಳಿ ಎರಡು ಬ್ಯಾಗ್ ಗಳಿದ್ದು ಆತನನ್ನು ಪರಿಶೀಲಿಸಲು ಭದ್ರತಾ ಸಿಬ್ಬಂದಿ ಮುಂದಾದಾಗ ಆತ ತನ್ನ ಬಳಿಯಿಂದ ಚೂರಿಯನ್ನು ತೆಗೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಮುಂದಾದಾಗ ಗುಂಡೇಟು ಹೊಡೆಯಲಾಗಿದೆ.