ತೈವಾನ್'ನಲ್ಲಿ ಭೀಕರ ಅಪಘಾತ: 32 ಮಂದಿ ಸಾವು, ಹಲವರಿಗೆ ಗಾಯ 
ವಿದೇಶ

ತೈವಾನ್'ನಲ್ಲಿ ಭೀಕರ ಅಪಘಾತ: 32 ಮಂದಿ ಸಾವು, ಹಲವರಿಗೆ ಗಾಯ

ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್'ವೊಂದು ತಿರುವು ತೆಗೆದುಕೊಳ್ಳುವ ವೇಳೆ ಮೊಗುಚಿ ಬಿದ್ದ ಪರಿಣಾಮ 32 ಮಂದಿ ದುರ್ಮರಣವನ್ನಪ್ಪಿರುವ ಘಟನೆ ಪೂರ್ವ ಚೀನಾದ ತೈವಾನ್ ನಲ್ಲಿ...

ತೈಪೈ: ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್'ವೊಂದು ತಿರುವು ತೆಗೆದುಕೊಳ್ಳುವ ವೇಳೆ ಮೊಗುಚಿ ಬಿದ್ದ ಪರಿಣಾಮ 32 ಮಂದಿ ದುರ್ಮರಣವನ್ನಪ್ಪಿರುವ ಘಟನೆ ಪೂರ್ವ ಚೀನಾದ ತೈವಾನ್ ನಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

ಪ್ರವಾಸಿಗರ ಬಸ್ ತೈಚುಂಗ್ ಗೆ ಭೇಟಿ ನೀಡಿ ನಂತರ ಹಿಂತಿರುಗಿ ಬರುತ್ತಿದ್ದು. ಈ ವೇಳೆ ರಸ್ತೆಯೊಂದರ ಎಡಬದಿಯಲ್ಲಿ ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ಬಸ್ ಮೊಗುಚಿ ಬಿದ್ದಿದೆ. ಬಸ್ ನಲ್ಲಿ 45 ಮಂದಿ ಪ್ರವಾಸಿಗರಿದ್ದು, ಸಾವನ್ನಪ್ಪಿದ ಬಹುತೇಕರಲ್ಲಿ ಹಿರಿಯರೇ ಹೆಚ್ಚಾಗಿದ್ದರು ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಅಗ್ನಿ ಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ, ಈ ವರೆಗೂ 32 ಮಂದಿ ಘಟನೆಯಲ್ಲಿ ಸಾವನ್ನಪ್ಪಿದ್ದು, 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿಸಿವೆ. ಗಾಯಾಳುಗಳ ಪರಿಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ED ದೂರಿನ ಹಿಂದೆ ಬಿಜೆಪಿಯ ಕೈವಾಡವಿದೆ: ಚಿನ್ನದ ಗಣಿಗಾರಿಕೆ ಕುರಿತ ಆರೋಪ ಸಾಬೀತುಪಡಿಸಲಿ- ಸತೀಶ್ ಜಾರಕಿಹೊಳಿ ಸವಾಲು!

"ನಾವು ಕೈ ಜೋಡಿಸೋಣ": ಗಲ್ವಾನ್ ಸಂಘರ್ಷದ ಬಳಿಕ ಮೊದಲ ಮಾತುಕತೆ ವೇಳೆ Narendra Modi ಗೆ Xi Jinping ಸಂದೇಶ; ಭಾರತದೆದುರು ಮಂಡಿಯೂರಿದ ಚೀನಾ?

ಪ್ರಶ್ನೆ ಪತ್ರಿಕೆ ಸೋರಿಕೆ ಸಹಿಸಲ್ಲ: KPSC ವಿರುದ್ಧ ಹೋರಾಟಕ್ಕೆ CJP ಎಂಟ್ರಿ: ನೊಂದ ಅಭ್ಯರ್ಥಿಗಳಿಗೆ ನ್ಯಾಯದ ಭರವಸೆ

ಮೈಸೂರಿನ 'ಪೇಟೆ ರೌಡಿ' ಪೊಲೀಸ್ ಠಾಣೆಗೆ ನುಗ್ಗಿದ್ರೆ ನಾನು ಸೀದಾ ಪರಪ್ಪನ ಅಗ್ರಹಾರಕ್ಕೆ ನುಗ್ಗಿಸುತ್ತೇನೆ: ಪ್ರತಾಪ್ ಸಿಂಹಗೆ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನ್

ಚೀನಾ ಇದ್ದರೂ ಬ್ರಿಕ್ಸ್‌ ಸದಸ್ಯತ್ವಕ್ಕಾಗಿ 3 ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ರೂ ಅವಕಾಶ ಸಿಕ್ಕಿಲ್ಲ: ಪಾಕ್ ಗೋಳಾಟ!