ವಿದೇಶ

ಅಮೆರಿಕಾದ ಅತ್ಯುತ್ತಮ ಅಧ್ಯಕ್ಷರ ಪಟ್ಟಿಯಲ್ಲಿ ಒಬಾಮಗೆ 12 ನೇ ಸ್ಥಾನ!

Srinivas Rao BV
ವಾಷಿಂಗ್ ಟನ್: ಅಮೆರಿಕಾದ ಅತ್ಯುತ್ತಮ ಅಧ್ಯಕ್ಷರುಗಳ ಬಗ್ಗೆ ಸಮೀಕ್ಷೆ ನಡೆಸಲಾಗಿದ್ದು, ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮ 12 ನೇ ಅತ್ಯುತ್ತಮ ನಾಯಕ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. 
1913-1921 ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ವುಡ್ರೋ ವಿಲ್ಸನ್ ಹಾಗೂ 1817-1825 ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಜೇಮ್ಸ್ ಮನ್ರೋ ಅವರ ನಡುವಿನ ಸ್ಥಾನದಲ್ಲಿ ಬರಾಕ್ ಒಬಾಮ ಇದ್ದಾರೆ ಎಂದು ಎನ್ ಬಿಸಿ ನ್ಯೂಸ್ ವರದಿ ಪ್ರಕಟಿಸಿದೆ. ಅತ್ಯುತ್ತಮ ಅಧ್ಯಕ್ಷರುಗಳಿಗಾಗಿ 2000 ರಿಂದಲೇ ಸಮೀಕ್ಷೆ ನಡೆಸಲಾಗುತ್ತಿದ್ದು, ಈಗ ಪ್ರಕಟವಾಗಿರುವುದು ಮೂರನೇ ಸಮೀಕ್ಷೆಯಾಗಿದೆ. 
ಸಂಕಷ್ಟದ ಸಂದರ್ಭಗಳಲ್ಲಿ ಸಮರ್ಥ ನಾಯಕತ್ವ ನೀಡಿದ ಅಧ್ಯಕ್ಷರು, ನೈತಿಕತೆ ಹೊಂದಿದ್ದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಖ್ಯಾತಿ ಗಳಿಸಿದ್ದ, ಎಲ್ಲರಿಗೂ ಸಮಾನ ನ್ಯಾಯ ನೀಡಿದ್ದ ಅಂಶಗಳನ್ನು ಅತ್ಯುತ್ತಮ ಅಧ್ಯಕ್ಷರ ಆಯ್ಕೆಯ ಸಮೀಕ್ಷೆಯಲ್ಲಿ ಪರಿಗಣಿಸಲಾಗಿದೆ. 
ಎಲ್ಲರಿಗೂ ಸಮಾನ ನ್ಯಾಯ ಒದಗಿಸುವ ವಿಚಾರದಲ್ಲಿ ಅಬ್ರಹಮ್ ಲಿಂಕನ್ ಹಾಗೂ ಲಿಂಡನ್ ಜಾನ್ಸನ್ ನ ನಂತರದ ಸ್ಥಾನದಲ್ಲಿ ಬರಾಕ್ ಒಬಾಮ ಹೆಸರಿದೆ. ಅಂತಾರಾಷ್ಟ್ರೀಯ ಸಂಬಂಧ ವೃದ್ಧಿಯ ವಿಚಾರವಾಗಿ ಒಬಾಮ 24 ನೇ ಸ್ಥಾನದಲ್ಲಿದ್ದರೆ, ಅಮೆರಿಕಾ ಕಾಂಗ್ರೆಸ್ ನೊಂಡಿಗೆ ಅತ್ಯುತ್ತಮ ಒಡನಾಟ ಹೊಂದಿದ್ದ 5 ನೇ ಅಧ್ಯಕ್ಷರಾಗಿ ಒಬಾಮ ಹೆಸರಿ ಪಟ್ಟಿಯಲ್ಲಿದೆ. 
SCROLL FOR NEXT