ಶಾಪಿಂಗ್ ಸೆಂಟರ್ ಗೆ ಬಿದ್ದ ವಿಮಾನ ಹೊತ್ತಿ ಉರಿಯುತ್ತಿರುವುದು. 
ವಿದೇಶ

ಆಸ್ಟ್ರೇಲಿಯಾ: ಮೆಲ್ಬೋರ್ನ್ ಶಾಪಿಂಗ್ ಸೆಂಟರ್ ಗೆ ಅಪ್ಪಳಿಸಿದ ವಿಮಾನ: ಐವರು ಸಾವು

ಆಸ್ಟ್ರೇಲಿಯಾದ ಮೆಲ್ಬೋರ್ನ್ ಸಮೀಪ ಬೆಂಕಿ ಹತ್ತಿಕೊಂಡು ಹಗುರ ವಿಮಾನ ಸ್ಫೋಟಗೊಂಡು...

ಸಿಡ್ನಿ: ಆಸ್ಟ್ರೇಲಿಯಾದ ಮೆಲ್ಬೋರ್ನ್ ಸಮೀಪ ಬೆಂಕಿ ಹತ್ತಿಕೊಂಡು ಹಗುರ ವಿಮಾನ  ಸ್ಫೋಟಗೊಂಡು ವಿಮಾನದಲ್ಲಿದ್ದ ಎಲ್ಲಾ 5 ಮಂದಿ ಮೃತಪಟ್ಟಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿರುವ ಶಾಪಿಂಗ್ ಸೆಂಟರ್ ವೊಂದಕ್ಕೆ ಹೊಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಬೀಚ್ ಕ್ರಾಫ್ಟ್ ವಿಮಾನ ಟೇಕ್ ಆಫ್ ಆದ ತಕ್ಷಣವೇ ತನ್ನ ದಿಕ್ಕನ್ನು ಬದಲಾಯಿಸಿ ಶಾಪಿಂಗ್ ಸೆಂಟರ್ ಗೆ ಹೋಗಿ ಅಪ್ಪಳಿಸಿತು. ಶಾಪಿಂಗ್ ಸೆಂಟರ್ ಎಸ್ಸೆಂಡಾನ್ ಫೀಲ್ಡ್ ಏರ್ ಪೋರ್ಟ್ ಪಕ್ಕದಲ್ಲಿಯೇ ಇದೆ.
ವಿಮಾನದಲ್ಲಿದ್ದ ಎಲ್ಲಾ ಐವರು ಮೃತಪಟ್ಟಿದ್ದಾರೆ ಎಂದು ವಿಕ್ಟೋರಿಯಾ ಸಹಾಯಕ ಪೊಲೀಸ್ ಆಯುಕ್ತ ಸ್ಟೆಫನ್ ಲಿಯಾನೆ ತಿಳಿಸಿದ್ದಾರೆ.
ಕಳೆದ ಮೂರು ದಶಕಗಳಲ್ಲಿ ಇದು ಅತ್ಯಂತ ಭೀಕರ ವಿಮಾನ ಅಪಘಾತ ಎಂದು ವಿಕ್ಟೋರಿಯಾ ಪ್ರಧಾನ ಮಂತ್ರಿ ಡೇನಿಯಲ್ ಆಂಡ್ರ್ಯೂಸ್ ಬಣ್ಣಿಸಿದ್ದಾರೆ.ಎಸ್ಸೆಂಡಾನ್ ವಿಮಾನ ನಿಲ್ದಾಣದಿಂದ ಹೊರಟ ಖಾಸಗಿ ವಿಮಾನ ಸ್ವಲ್ಪ ಹೊತ್ತಿನಲ್ಲಿಯೇ ಅಪ್ಪಳಿಸಿದೆ. ವಾಹಿನಿಯ ನೇರ ಪ್ರಸಾರದಲ್ಲಿ ಹೊತ್ತಿ ಉರಿದ ಅವಶೇಷಗಳು, ಹೊಗೆ ಮತ್ತು ಶಾಪಿಂಗ್ ಸೆಂಟರ್ ಮತ್ತು ಪಕ್ಕದ ಕಟ್ಟಡದಲ್ಲಿ ಉಂಟಾದ ನಷ್ಟ ಕಾಣುತ್ತಿದೆ.
ಸ್ಥಳಕ್ಕೆ ತನಿಖಾ ತಂಡವನ್ನು ಕಳುಹಿಸಲಾಗಿದೆ ಎಂದು ಆಸ್ಟ್ರೇಲಿಯಾದ ಸುರಕ್ಷಾ ಸಾರಿಗೆ ವಿಭಾಗ ತಿಳಿಸಿದೆ. ಎಸ್ಸೆಂಡಾನ್ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದ್ದು, ಎಲ್ಲಾ ವಿಮಾನಗಳನ್ನು ಮೆಲ್ಬೋರ್ನ್ ನ ಎರಡು ಪ್ರಮುಖ ವಿಮಾನ ನಿಲ್ದಾಣಗಳಾದ ಟುಲ್ಲಮೆರಿನ್ ಮತ್ತು ಅವಲನ್ ಗೆ ಕಳುಹಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video