ಲಾಹೋರ್:ಇಲ್ಲಿನ ಡಿಎಚ್ಎ ಝಡ್-ಬ್ಲಾಕ್ ನಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 5 ಮಂದಿ ಮೃತಪಟ್ಟು 30 ಮಂದಿ ಗಾಯಗೊಂಡಿದ್ದಾರೆ.
ಪಾಕಿಸ್ತಾನದ ಲಾಹೋರ್ ಪ್ರಾಂತ್ಯದ ಶಾಪಿಂಗ್ ಪ್ರದೇಶದಲ್ಲಿ ಕಟ್ಟಡವೊಂದರಲ್ಲಿ ಸ್ಫೋಟ ಸಂಭವಿಸಿತು. ಇದೊಂದು ಬಾಂಬ್ ದಾಳಿ ಎಂದು ಪಂಜಾಬ್ ಪ್ರಾಂತ್ಯದ ಪೊಲೀಸರ ವಕ್ತಾರರು ತಿಳಿಸಿದ್ದಾರೆ.
ವಾಹಿನಿಯಲ್ಲಿ ಪ್ರಸಾರವಾದ ದೃಶ್ಯದಲ್ಲಿ ಸ್ಫೋಟದಿಂದ ಹೊಗೆಯುರುಳುತ್ತಿದ್ದ ಕಟ್ಟಡ ಮತ್ತು ಕಾರುಗಳ ಕಿಟಕಿ, ಬಾಗಿಲುಗಳು ಮುರಿದದ್ದು ಕಂಡುಬಂದಿದೆ.
ದೇಶಾದ್ಯಂತ ಉಗ್ರ ವಿರೋಧಿ ಕಾರ್ಯಾಚರಣೆ ಆರಂಭಿಸುವುದಾಗಿ ಸೇನೆ ಘೋಷಿಸಿದ ಮರುದಿನವೇ ಈ ದಾಳಿ ನಡೆದಿದೆ.