ವಿದೇಶ

2017 ನ್ಯಾಯದ ವರ್ಷವಾಗಲಿದೆ: ಇಮ್ರಾನ್ ಖಾನ್

Manjula VN

ಕರಾಚಿ: 2017ನೇ ಸಾಲಿನ ವರ್ಷದ ನ್ಯಾಯದ ವರ್ಷವಾಗಲಿದೆ ಎಂದು ಪಾಕಿಸ್ತಾನದ ವಿಪಕ್ಷ ನಾಯಕ ಇಮ್ರಾನ್ ಖಾನ್ ಅವರು ಭಾನುವಾರ ಹೇಳಿದ್ದಾರೆ.

ಗೆಳಯ ತರೀಫ್ ಶಫಿ ಅವರ ನಿವಾಸ ಹೊರಾಂಗಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು. ಕರಾಚಿ ಭೇಟಿ ಯಶಸ್ವಿಯಾಗಿದೆ. ಸಾಕಷ್ಟು ವಿಚಾರಗಳು ಹಾಗೂ ಸಮಸ್ಯೆಗಳು ತಲೆದೋರಿದ್ದರಿಂದಾಗಿ ಸಿಂಧ್ ಪ್ರಾಂತ್ಯದ ಬಗ್ಗೆ ಗಮನಹರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಹಿಂತಿರುಗಿ ಬಂದಿದ್ದು, ಸಿಂಧ್ ಪ್ರಾಂತ್ಯದ ಬಗ್ಗೆ ಗಮನ ಹರಿಸುತ್ತೇನೆಂದು ಹೇಳಿದ್ದಾರೆ.

ಪ್ರಸ್ತುತ ದೇಶದಲ್ಲಿ ಅಧಿಕಾರಿ ನಡೆಸುತ್ತಿರುವ ನಾಯಕರು ಕಳ್ಳರಾಗಿದ್ದು, ದೇಶದ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಇದೀಗ ಈ ಕಳ್ಳರಿಗೆ ಅಂತ್ಯ ಹಾಡುವ ಸಮಯ ಬಂದಿದೆ. ಕರಾಚಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಿದೆ. ಮತ್ತೆ ಕರಾಚಿಗೆ ಮರಳು ಬರುತ್ತೇನೆ. ಪ್ರಸ್ತುದ ಸಿಂಧ್ ಪ್ರಾಂತ್ಯದ ಗ್ರಾಮ ಹಾಗೂ ನಗರದ ಜನತೆಗೆ ಕಡೆಗೆ ಗಮನ ಹರಿಸುತ್ತೇನೆಂದು ತಿಳಿಸಿದ್ದಾರೆ.

ಈ ಹಿಂದಷ್ಟೇ ಹೇಳಿಕೆ ನೀಡಿದ್ದ ಜಾವೆದ್ ಹಶ್ಮಿ ಅವರು, 2014ರಲ್ಲಿ ಇಮ್ರಾನ್ ಖಾನ್ ಅವರು ವೈವಾಹಿಕ ಕಾನೂನನ್ನು ಜಾರಿಗೆ ತರಲು ಮುಂದಾಗಿದ್ದರು. ಆದರೆ, ಇದು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು.

ಹಶ್ಮಿ ಅವರ ಹೇಳಿಕೆಗೆ ಪರೋಕ್ಷವಾಗಿ ಹೇಳಿಕೆ ನೀಡಿರುವ ಅವರು, ಪಕ್ಷದ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳಲಿದ್ದೇವೆ. ಕೆಲವರು ಪಕ್ಷದ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಅಂತಹವರ ವಿರುದ್ಧ ಕ್ರಮಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ.

SCROLL FOR NEXT