ವಿದೇಶ

ಇಸ್ತಾಂಬುಲ್ ಉಗ್ರರ ದಾಳಿ: ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಂಡನೆ

Manjula VN

ಇಸ್ತಾಂಬುಲ್: ಟರ್ಕಿ ಮೇಲಿನ ಉಗ್ರರ ಅಟ್ಟಹಾಸವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೋಮವಾರ ಖಂಡಿಸಿದೆ.

ಟರ್ಕಿಯ ಇಸ್ತಾಬುಂಲ್ ಮೇಲೆ ಉಗ್ರರು ದಾಳಿ ನಡೆಸಿದ ಪ್ರಕರಣ ಸಂಬಂಧ ವಿಶ್ವಸಂಸ್ಥೆ ಭದ್ರತಾ ಮಂಡಳಿ ಮಾಧ್ಯಮ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದು, ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಅಲ್ಲದೆ, ಸಾವನ್ನಪ್ಪಿದವರ ಹಾಗೂ ಗಾಯಗೊಂಡ ಕುಟುಂಬಸ್ಥರಿಗಾಗಿ ಸಂತಾಪವನ್ನು ಸೂಚಿಸಿದೆ.

ಉಗ್ರ ದಾಳಿ ಘೋರ ಹಾಗೂ ಅನಾಗರೀಕ ವರ್ತನೆಯಾಗಿದೆ. ಭಯೋತ್ಪಾದನೆ ಎಲ್ಲೆಡೆ ಪಸರುತ್ತಿದ್ದು, ಭಯೋತ್ಪಾದನೆ ಅಂತರಾಷ್ಟ್ರೀಯ ಶಾಂತಿ ಹಾಗೂ ಭದ್ರಗೆ ದೊಡ್ಡ ಬೆದರಿಕೆಯಾಗಿದೆ ಎಂದು ಹೇಳಿದೆ.

ಇಸ್ತಾಂಬುಲ್'ನ ನೈಟ್ ಕ್ಲಬ್'ವೊಂದರಲ್ಲಿ ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಜನರು ಸಂಭ್ರವನ್ನು ಆಚರಿಸುತ್ತಿದ್ದರು. ಈ ವೇಳೆ ಉಗ್ರರು ಇದ್ದಕ್ಕಿದ್ದಂತೆ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ 39 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ 16 ಮಂದಿ ವಿದೇಶಿಗರಾಗಿದ್ದಾರೆ. ಅಲ್ಲದೆ, ಇಬ್ಬರು ಭಾರತೀಯರೂ ಕೂಡ ಘಟನೆಯಲ್ಲಿ ಸಾವನ್ನಪ್ಪಿದ್ದಾರೆಂದು ಮೂಲಗಳು ತಿಳಿಸಿವೆ.

SCROLL FOR NEXT