ನ್ಯೂಯಾರ್ಕ್: ಬ್ರಿಟಿಷ್ ಕಲಾ ವಿಮರ್ಶಕ, ಪ್ರವರ್ತಕ, ಬೌದ್ಧಿಕ ಮತ್ತು ಅಸಾಧಾರಣ ಲೇಖಕ ಜ್ಹಾನ್ ಬರ್ಗರ್ ನಿನ್ನೆ(ಸೋಮವಾರ) ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಬರ್ಗರ್ ಅವರು ಅಂಟೊನಿಯ ಪ್ಯಾರಿಸ್ ಉಪನಗರದಲ್ಲಿ ನಿಧನರಾದರು ಎಂದು ಅವರ ಸ್ನೇಹಿತ ಸೈಮನ್ ಎಂಸಿಬರ್ನಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಅವರು ಕಳೆದೊಂದು ವರ್ಷದಿಂದ ಅಸೌಖ್ಯಕ್ಕೊಳಗಾಗಿದ್ದರು.ವಿಮರ್ಶಕ, ಕಾದಂಬರಿ, ಕವಿತೆ, ನಾಟಕ ಮತ್ತು ವಿಶಿಷ್ಟ ಪುಸ್ತಕಗಳ ಬರವಣಿಗೆಗೆ ಹೆಸರಾಗಿರುವ ಬರ್ಗರ್ 20ನೇ ಶತಮಾನದ ಚಿಂತಕರ ಮೇಲೆ ಪ್ರಭಾವ ಬೀರಿದ್ದರು. ಸತತವಾಗಿ, ಪ್ರಚೋದನಾತ್ಮಕವಾಗಿ ಕಲೆ ಮತ್ತು ಸಮಾಜದ ಸಾಂಪ್ರದಾಯಿಕ ವ್ಯಾಖ್ಯಾನಗಳು ಸವಾಲುಗಳು ಮತ್ತು ಅವುಗಳ ನಡುವಿನ ಸಂಬಂಧವನ್ನು ತಮ್ಮ ಬರಹಗಳಲ್ಲಿ ತೋರಿಸುತ್ತಿದ್ದರು.
ಅವರ 1972 ಪುಸ್ತಕ ಮತ್ತು ಬಿಬಿಸಿ ಸರಣಿಗಳು, ವೇಸ್ ಆಫ್ ಸೀಯಿಂಗ್ ಒಂದು ತಲೆಮಾರಿನ ಕಲೆಗೆ ಮರು ವ್ಯಾಖ್ಯಾನ ನೀಡಿದ್ದವು.