ವಿದೇಶ

'ಒಂದು-ಚೀನಾ ನೀತಿ'ಗೆ ಅಮೆರಿಕಾ ಬದ್ಧವಾಗಿರಲಿದೆ: ಕೆರ್ರಿ

Guruprasad Narayana
ಬೀಜಿಂಗ್: 'ಒಂದು-ಚೀನಾ ನೀತಿ'ಗೆ ಅಮೆರಿಕಾ ಬದ್ಧವಾಗಿರಲಿದೆ ಎಂದು ರಾಜ್ಯ ಕಾರ್ಯದರ್ಶಿ ಜಾನ್ ಕೆರ್ರಿ ದೂರವಾಣಿ ಮೂಲಕ ತಿಳಿಸಿರುವುದಾಗಿ ಚೈನಾ ವಿದೇಶಾಂಗ ಸಚಿವ ವಾಂಗ್ ಯಿ ಮಾಧ್ಯಮಗಳಿಗೆ ಹೇಳಿದ್ದಾರೆ. ಕೆರ್ರಿ ಈ ತಿಂಗಳಲ್ಲಿ ಕಾರ್ಯದರ್ಶಿ ಸ್ಥಾನವನ್ನು ತೊರೆಯಲಿದ್ದಾರೆ. 
ತೈವಾನ್ ಅಧ್ಯಕ್ಷ ಟಿಸೈ ಇಂಗ್-ವೆನ್ ಅವರು ಅಮೆರಿಕಾ ಪ್ರವಾಸ ಮಾಡಲಿದ್ದಾರೆ ಎಂಬ ಸುದ್ದಿ ಹಿನ್ನಲೆಯಲ್ಲಿ ಈ ಎರಡು ರಾಷ್ಟ್ರಗಳ ನಾಯಕರ ನಡುವೆ ದೂರವಾಣಿ ಸಂಭಾಷಣೆ ನಡೆದಿದೆ. 
'ಒಂದು-ಚೀನಾ ನೀತಿ'ಯ ಪ್ರಕಾರ ಚೈನಾ, ತೈವಾನ್ ತನ್ನ ಭಾಗ ಎಂದು ಕರೆದುಕೊಳ್ಳುತ್ತದೆ. ಈ ದೂರವಾಣಿ ಸಂಭಾಷಣೆಯ ವೇಳೆಯಲ್ಲಿ ವಾಂಗ್ ಜೊತೆಗೆ ಕೆರ್ರಿ ಅಮೆರಿಕಾ-ಚೈನಾ ದ್ವಿಪಕ್ಷೀಯ ಸಂಬಂಧದ ಮಹತ್ವವನ್ನು ಒತ್ತಿ ಹೇಳಿದ್ದಾರೆ ಎನ್ನಲಾಗಿದೆ. 
ತೈವಾನ್ ಅಧ್ಯಕ್ಷರ ಜೊತೆಗೆ, ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಡೊನಾಲ್ಡ್ ಟ್ರಂಪ್ ದೂರವಾಣಿ ಸಂಭಾಷಣೆ ನಡೆಸಿದ್ದಕ್ಕೂ ಚೈನಾ ಆಕ್ರೋಶ ವ್ಯಕ್ತಪಡಿಸಿತ್ತು. 
ನೂತನವಾಗಿ ಅಧಿಕಾರ ಸ್ವೀಕರಿಸಲಿರುವ ಅಮೆರಿಕಾ ಆಡಳಿತ, ದ್ವಿಪಕ್ಷೀಯ ಸಂಬಂಧಗಳ ನಡುವೆ ಎಚ್ಚರಿಕೆಯ ನಡೆ ಇಡಬೇಕು ಮತ್ತು ಚೈನಾ ದೇಶದ ರಾಷ್ಟ್ರೀಯ ಹಿತಾಸಕಿ ಮತ್ತು ಸಾರ್ವಭೌಮತ್ವಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸೂಕ್ಷ್ಮತೆಯನ್ನು ನಡೆದುಕೊಳ್ಳಬೇಕು ಎಂದು ವಾಂಗ್ ಎಚ್ಚರಿಸಿದ್ದಾರೆ. 
SCROLL FOR NEXT