ಒಬಾಮ-ನರೇಂದ್ರ ಮೋದಿ 
ವಿದೇಶ

ಪ್ರಧಾನಿ ಕಾರ್ಯಾಲಯ-ಶ್ವೇತ ಭವನ ನಡುವಿನ ಹಾಟ್​ಲೈನ್​ ಜ.20 ರ ನಂತರವೂ ಮುಂದುವರಿಕೆ!

ಭಾರತದ ಪ್ರಧಾನಿ ಅಮೆರಿಕ ಅಧ್ಯಕ್ಷರ ನಡುವೆ ನೇರ ದೂರವಾಣಿ ಸಂಪರ್ಕ ಹಾಟ್ ಲೈನ್ ಜ.20 ರ ನಂತರ ಅಂದರೆ ಅಮೆರಿಕದ ನೂತನ ಅಧ್ಯಕ್ಷರ ಪದಗ್ರಹಣದ ಬಳಿಕವೂ ಮುಂದುವರೆಯಲಿದೆ ಎಂದು...

ವಾಷಿಂಗ್ ಟನ್: ಭಾರತದ ಪ್ರಧಾನಿ ಅಮೆರಿಕ ಅಧ್ಯಕ್ಷರ ನಡುವೆ ನೇರ ದೂರವಾಣಿ ಸಂಪರ್ಕ ಹಾಟ್ ಲೈನ್ ಜ.20 ರ ನಂತರ ಅಂದರೆ ಅಮೆರಿಕದ ನೂತನ ಅಧ್ಯಕ್ಷರ ಪದಗ್ರಹಣದ ಬಳಿಕವೂ ಮುಂದುವರೆಯಲಿದೆ ಎಂದು ಅಮೆರಿಕ ಅಧ್ಯಕ್ಷರ ಕಚೇರಿ ಸ್ಪಷ್ಟಪಡಿಸಿದೆ. 
2015 ರಲ್ಲಿ ಭಾರತ-ಅಮೆರಿಕದ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇರ ದೂರವಾಣಿ ಸಂಪರ್ಕ ಸಾಧಿಸುವ ಹಾಟ್ ಲೈನ್ ಆರಂಭಿಸಿದ್ದರು. ಬರಾಕ್ ಒಬಾಮ ಅವರ 8 ವರ್ಷಗಳ ಆಡಳಿತದ ಅವಧಿಯಲ್ಲಿ ಹೊಸತಾಗಿ ಪ್ರಾರಂಭವಾದ ಏಕೈಕ ಹಾಟ್ ಲೈನ್ ಭಾರತದ ಪ್ರಧಾನಿಯೊಂದಿಗಿನದ್ದು ಎಂಬುದು ವಿಶೇಷವಾಗಿದ್ದು, ಈ ಸೇವೆ ಅಮೆರಿಕದ ನೂತನ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅವಧಿಯಲ್ಲೂ ಮುಂದುವರೆಯಲಿದೆ ಎಂದು ಶ್ವೇತ ಭವನ ತಿಳಿಸಿದೆ. 
2015 ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವೇಳೆ ಒಬಾಮ ಭಾರತ-ಅಮೆರಿಕ ನಡುವೆ ಹಾಟ್​ಲೈನ್ ಸೇವೆ ಆರಂಭಿಸಲು ನಿರ್ಧರಿಸಿದ್ದರು. ಹಾಟ್​ಲೈನ್ ಎರಡು ರಾಷ್ಟ್ರಗಳ ಮುಖ್ಯಸ್ಥರ ನಡುವೆ ಸಂವಹನ ನಡೆಸಲು ಅತ್ಯಂತ ಸುರಕ್ಷಿತ ಟೆಲಿಫೋನ್ ಸಂಪರ್ಕವಾಗಿದೆ. ಸಮಸ್ಯೆಗೆ ತಕ್ಷಣವೇ ಸ್ಪಂದಿಸಲು ಈ ವ್ಯವಸ್ಥೆ ನೆರವಾಗುತ್ತದೆ. ರಷ್ಯಾ, ಬ್ರಿಟನ್, ಚೀನಾದ ಜತೆಗೆ ಅಮೆರಿಕ ಹಾಟ್​ಲೈನ್ ಸೇವೆ ಹೊಂದಿದ್ದು, ಈ ಸೇವೆ ಪಡೆದ ನಾಲ್ಕನೇ ರಾಷ್ಟ್ರ ಭಾರತವಾಗಿದೆ.
ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಹಾಟ್ ಲೈನ್ ಮುಂದುವರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹಾಟ್ ಲೈನ್ ಎಂಬುದು ಕೇವಲ ಒಬ್ಬ ಅಧ್ಯಕ್ಷರ ಅವಧಿಯ ಆಡಳಿತಕ್ಕೆ ಸಂಬಂಧಿಸಿದ್ದಲ್ಲ, ಎಷ್ಟೇ ಅಧ್ಯಕ್ಷರುಗಳು ಬದಲಾದರೂ ಹಾಟ್ ಲೈನ್ ಮುಂದುವರೆಯುತ್ತದೆ. ಒಂದು ವೇಳೆ ಹಾಟ್ ಲೈನ್ ನ್ನು ಮುಂದುವರಿಸದೇ ಇದ್ದಲ್ಲಿ ಅದು ಅತ್ಯಂತ ಅಚ್ಚರಿಯ ಸಂಗತಿಯಾಗಿರಲಿದೆ ಎಂದು ಹೇಳಿದ್ದಾರೆ. 
2015 ರಲ್ಲಿ ನಡೆದ ಜಿ–20 ಶೃಂಗಸಭೆ, ಪೂರ್ವ ಏಷ್ಯಾ ಶೃಂಗಸಭೆ ಮತ್ತು ಪ್ಯಾರಿಸ್‌ ಹವಾಮಾನ ವೈಪರೀತ್ಯ ಕುರಿತ ಸಮ್ಮೇಳನಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹಾಗೂ ನರೇಂದ್ರ ಮೋದಿ ಮೊದಲ ಬಾರಿಗೆ ಹಾಟ್ ಲೈನ್ ಮೂಲಕ ಮಾತುಕತೆ ನಡೆಸಿ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ಹಾಗೂ ಜಿ–20 ಶೃಂಗಸಭೆಯಲ್ಲಿ ಚರ್ಚೆ ಮಾಡಲಿರುವ ವಿಷಯಗಳ ಕುರಿತು ಚರ್ಚಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT