ವಿಶ್ವಸಂಸ್ಥೆ: ವಿಶ್ವದ ಜಸಂಖ್ಯೆಗೆ ಹೋಲಿಸಿದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅತ್ಯಂತ ಕಡಿಮೆ ಪ್ರಾತಿನಿಧ್ಯ ಹೊಂದಿದ್ದು ನಿಷ್ಕ್ರಿಯವಾಗಿದೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯನ್ನು ಭಾರತ ಟೀಕಿಸಿದೆ.
ವಿಶ್ವಸಂಸ್ಥೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಭಾರತದ ಪ್ರತಿನಿಧಿ ಸಯೀದ್ ಅಕ್ಬರುದ್ದೀನ್, ಪ್ರಪಂಚ ಬದಲಾಗುತ್ತಿದೆ, ಆದರೆ ವಿಶ್ವದ ಶಾಂತಿಗಾಗಿ ಕಾರ್ಯನಿರ್ವಹಿಸಬೇಕಿರುವ ಸಂಸ್ಥೆ ಆಧುನೀಕರಣಗೊಳ್ಳದೇ, ನಿಷ್ಕ್ರಿಯವಾಗಿದೆ. ಪ್ರಪಂಚ ಬದಲಾಗುತ್ತಿದ್ದಂತೆ ಭದ್ರತಾ ಮಂಡಳಿಯಲ್ಲಿ ನಿರ್ಣಯ ಕೈಗೊಳ್ಳುವ ರಾಷ್ಟ್ರಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿಷ್ಕ್ರಿಯವಾಗುತ್ತಿದೆ ಎಂದು ಹೇಳಿದ್ದಾರೆ.
ಕೇವಲ 15 ರಾಷ್ಟ್ರಗಳು ವಿಶ್ವದ ಜನರಿಗೆ ನಿಯಮಗಳನ್ನು ರೂಪಿಸುವುದು ಸೂಕ್ತವಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಾಸ್ತವ ಸನ್ನಿವೇಶಗಳಿಗೆ ತಕ್ಕಂತೆ ಆಧುನೀಕರಣಗೊಳ್ಳುವ ಅನಿವಾರ್ಯತೆ ಇದೆ ಎಂದು ಸಯೀದ್ ಅಕ್ಬರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.
ನಿಷ್ಕ್ರಿಯವಾಗಿರುವ ಸಂಸ್ಥೆಯೊಂದು ಸಮಕಾಲೀನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ, ಮುಷ್ಟಿ ಬಿಗಿಡಿದು ಹಸ್ತ ಲಾಘವ ನೀಡುವುದು ಸಾಧ್ಯವಿಲ್ಲ (you cannot shake hands with a clenched fist') ಮೊದಲು ವಿಶ್ವಸಂಸ್ಥೆಯ ಮನಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಯಾಗಬೇಕಿದೆ ಎಂದು ಸಯೀದ್ ಅಕ್ಬರುದ್ದೀನ್ ವಿಶ್ವಸಂಸ್ಥೆಗೆ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos