ವಿದೇಶ

ಪಾಕ್ ಉಗ್ರ ಸಂಘಟನೆಗಳಿಗೆ ಕಡಿವಾಣ ಹಾಕಬೇಕು: ಅಮೆರಿಕದ ನಿಯೋಜಿತ ರಕ್ಷಣಾ ಕಾರ್ಯದರ್ಶಿ

Lingaraj Badiger
ವಾಷಿಂಗ್ಟನ್: ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರಾವಾನಿಸಿರುವ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಆಯ್ಕೆಗೊಂಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಅವರು, ಇಸ್ಲಾಮಾಬಾದ್ ದೇಶದೊಳಗಿನ ಉಗ್ರ ಸಂಘಟನೆಗಳಿಗೆ ಕಡಿವಾಣ ಹಾಕುವ ಅಗತ್ಯ ಇದೆ ಎಂದಿದ್ದಾರೆ.
ಪಾಕಿಸ್ತಾನದೊಂದಿಗನ ನಮ್ಮ ಭದ್ರತಾ ನೆರವು ಮಿಶ್ರ ಇತಿಹಾಸವನ್ನು ಹೊಂದಿದೆ. ಆದರೆ ನಾನು ಎಲ್ಲಾ ಆಯ್ಕೆಯನ್ನು ಪರಿಶೀಲಿಸುತ್ತೇನೆ ಎಂದು ಮ್ಯಾಟಿಸ್ ಅವರು ಸೆನೆಟ್ ನ ಶಸ್ತ್ರಾಸ್ತ್ರ ಸೇವಾ ಸಮಿತಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿ ಮತ್ತು ಪ್ರಾದೇಶಿಕ ಭದ್ರತೆಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಸಹಕಾರ ನೀಡಲು  ರಾಜ್ಯ ಇಲಾಖೆ ಮತ್ತು ಕಾಂಗ್ರೆಸ್ ನೊಂದಿಗೆ ಕೆಲಸ ಮಾಡುತ್ತೇನೆ. ಆದರೆ ಪಾಕಿಸ್ತಾನ ತನ್ನ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರ ಸಂಘಟನೆಗಳಿಗೆ ಕಡಿವಾಣ ಹಾಕಬೇಕು ಎಂದು ಮ್ಯಾಟಿಸ್ ಹೇಳಿದ್ದಾರೆ.
ಇರಾಕ್ ಮತ್ತು ಅಫ್ಘಾನಿಸ್ತಾನದ ಯುದ್ಧ ಭೂಮಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ನಿವೃತ್ತ ಮರೀನ್ ಕಾರ್ಪ್ಸ್ ಜನರಲ್ ಜೇಮ್ಸ್ ಮ್ಯಾಟಿಸ್ ಅವರು ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾಗಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
SCROLL FOR NEXT