ವಾಷಿಂಗ್ಟನ್: ಅಮೆರಿಕದ ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮ ಅವರು ಮುಂದೊಂದು ದಿನ ಅಮೆರಿಕಕ್ಕೆ ಹಿಂದೂ ವ್ಯಕ್ಯಿಯೂ ಅಧ್ಯಕ್ಷನಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಎಲ್ಲಾ ವರ್ಗದವರನ್ನು ಹಾಗೂ ಪ್ರತಿ ಹಳ್ಳಿಯ ಮೂಲೆಯಲ್ಲಿದ್ದವರಿಗೂ ಈ ದೇಶ ಸಮಾಜ ಅವಕಾಶವನ್ನೇ ನೀಡುತ್ತಿದೆ. ಇದೇ ಅಮೆರಿಕದ ದೊಡ್ಡ ಶಕ್ತಿ. ಅದೇ ರೀತಿ ಮುಂದೊಂದು ದಿನ ಮಹಿಳೆಯೇ ಈ ದೇಶದ ಅಧ್ಯಕ್ಷೆ ಆಗಬಹುದು, ಯೆಹೂದಿ ಅಥವಾ ಹಿಂದೂ ವ್ಯಕ್ತಿಯೇ ಅಧ್ಯಕ್ಷ ಸ್ಥಾನ ಅಲಂಕರಿಸಬಹುದು ಎಂದು ತಮ್ಮ ಕೊನೆಯ ಸುದ್ದಿಗೋಷ್ಠಿಯಲ್ಲಿ ಬರಾಕ್ ಒಬಾಮ ಹೇಳಿದ್ದಾರೆ.
ಇದೇ ವೇಳೆ ಮುಂಬರುವ ದಿನ ನಾವೆಲ್ಲ ಕ್ಷೇಮವಾಗಿರಲಿದ್ದೇವೆ ಎನ್ನುವ ಮೂಲಕ ಟ್ರಂಪ್ ಆಡಳಿತದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.