ವಿದೇಶ

ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಒಬಾಮಾ ಕೇರ್ ಯೋಜನೆ ರದ್ದು ಮಾಡಿದ ಟ್ರಂಪ್!

Srinivas Rao BV
ವಾಷಿಂಗ್ ಟನ್: 
ಅಮೆರಿಕಾದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರದ ಭರವಸೆಗಳಲ್ಲಿ ಪ್ರಮುಖವಾಗಿದ್ದನ್ನು ಈಡೇರಿಸುವ ಕ್ರಮ ಕೈಗೊಂಡಿದ್ದು, ನಿರ್ಗಮಿತ ಅಧ್ಯಕ್ಷ ಒಬಾಮ ಜಾರಿಗೆ ತಂದಿದ್ದ ಒಬಾಮಕೇರ್ ಯೋಜನೆಯನ್ನು ರದ್ದುಗೊಳಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ.
ಮಧ್ಯಮ ವರ್ಗದ ಜನರಿಗೆ, ಬಡವರಿಗೆ ಅಗ್ಗದ ದರದಲ್ಲಿ ಆರೋಗ್ಯ ಸೇವೆಗಳನ್ನು ಕಲ್ಪಿಸುವ ಆರೋಗ್ಯ ವಿಮೆ ಕಲ್ಪಿಸುವ ಯೋಜನೆಯನ್ನು ಒಬಾಮಾ ಕೇರ್ ಎಂಬ ಹೆಸರಿನಲ್ಲಿ ಬರಾಕ್ ಒಬಾಮ ಜಾರಿಗೆ ತಂದಿದ್ದರು. ಇದೇ ಯೋಜನೆ ಅವರು ಎರಡನೇ ಅವಧಿಗೆ ಆಯ್ಕೆಯಾಗುವುದಕ್ಕೂ ಸಹ ಸಹಕಾರಿಯಾಗಿತ್ತು. ಆದರೆ ಈಗ ನೂತನ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಯೋಜನೆಯನ್ನು ರದ್ದುಗೊಳಿಸುವ ಆದೇಶ ಹೊರಡಿಸಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಒಬಾಮಾ ಕೇರ್ ಯೋಜನೆಯ ರದ್ದತಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. 
ಚುನಾವಣಾ ಪ್ರಚಾರದ ವೇಳೆ ತಾವು ಅಧಿಕಾರಕ್ಕೆ ಬಂದರೆ ಒಬಾಮಾ ಕೇರ್ ಯೋಜನೆಯನ್ನು ರದ್ದುಗೊಳಿಸುವುದಾಗಿ ಹೇಳಿದ್ದ ಟ್ರಂಪ್, ಒಬಾಮಾ ಕೇರ್ ಯೋಜನೆಯನ್ನು ದುರಂತವೆಂದಿದ್ದರು, ಅಷ್ಟೇ ಅಲ್ಲದೇ ಆರೋಗ್ಯ ಕ್ಷೇತ್ರಕ್ಕೆ ಮಹತ್ವ ನೀಡಲು ಹಳೆಯ ನಿಯಮಗಳನ್ನು ಪಾಲಿಸಲೇಬೇಕಿಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು. 
SCROLL FOR NEXT