ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಪತ್ರಕರ್ತರನ್ನು ಮಾನವ ಕುಲದಲ್ಲೇ ಅತಿ ಅಪ್ರಾಮಾಣಿಕರು ಎಂದು ಆರೋಪಿಸಿ ವಿಶ್ವ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾಧ್ಯಮಗಳೊಂದಿಗೆ ಸಮರ ಮುಂದುವರಿಸುವ ಸೂಚನೆ ನೀಡಿದ್ದಾರೆ.
ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಸಾಕ್ಷಿಯಾಗಿದ್ದರು. ಆದರೆ, ಮುಂಜಾನೆ ಸುದ್ದಿ ಮಾಧ್ಯಮ ಖಾಲಿ ಮೈದಾನವನ್ನು ತೋರಿಸುತ್ತಿತ್ತು. ಕಾರ್ಯಕ್ರಮದಲ್ಲಿ ಜನರು ಭಾಗಿಯಾಗದೆ ಬಣಗುಡುತ್ತಿತ್ತು ಎಂಬ ಸುದ್ದಿ ಪ್ರಸಾರವಾಗುತ್ತಿತ್ತು. ಕಡಿಮೆ ಜನ ಭಾಗಿಯಾಗಿದ್ದರು ಎಂಬ ಸುಳ್ಳು ಸುದ್ದಿ ಪ್ರಕಟಿಸಿರುವ ಮಾಧ್ಯಮಗಳು ತಕ್ಕ ಪರಿಣಾಮವನ್ನು ಎದುರಿಸುತ್ತವೆ ಎಂದು ಅಮೆರಿಕ ನೂತನ ಅಧ್ಯಕ್ಷ ಟ್ರಂಪ್ ಹರಿಹಾಯ್ದಿದ್ದಾರೆ.
ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ(ಸಿಐಎ) ಮುಖ್ಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಸಿಐಎ ಜತೆಗೆ ಮನಸ್ತಾಪವಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮಾಧ್ಯಮಗಳೊಂದಿಗೆ ನನ್ನ ಸಮರ ನಿರಂತರವಾಗಿದೆ. ಅವರು ಮಾನವ ಕುಲದಲ್ಲೇ ಅತಿ ಅಪ್ರಮಾಣಿಕರು ಎಂದು ಜರೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics