ವಿದೇಶ

ಮುಖ್ಯವಾಹಿನಿಯ ಮಾಧ್ಯಮಗಳು ಬಾಯಿಮುಚ್ಚಿಕೊಂಡಿರಬೇಕು ಎಂದು ಹೇಳಿದ ಟ್ರಂಪ್ ಸಲಹೆಗಾರ

Shilpa D

ವಾಷಿಂಗ್ಟನ್: ಅಮೆರಿಕಾದ ಮುಖ್ಯವಾಹಿನಿಯ ಎಲ್ಲಾ ಮಾಧ್ಯಮಗಳು ಬಾಯಿ ಮುಚ್ಚಿಕೊಂಡಿರಬೇಕು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಲಹೆಗಾರ ಸ್ಟೀಫನ್ ಕೆ ಬನ್ನಾನ್ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.

ಮಾಧ್ಯಮಗಳ ವಿರುದ್ಧ ಕಿಡಿಕಾರಿರುವ ಬನ್ನಾನ್ ಸುದ್ದಿ ಸಂಸ್ಥೆಗಳು ಜನರಲ್ ಎಲೆಕ್ಷನ್ ಫಲಿತಾಂಶದ ನಂತರ ಅವಮಾನಗೊಂಡಿದ್ದು, ತಾವು ವಿರೋಧ ಪಕ್ಷದವರಂತೆ ಮಾಧ್ಯಮಗಳು ವರ್ತಿಸುತ್ತಿವೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯೊಂದಿಗೆ ಕಾನ್ಫರೆನ್ಸ್ ಕಾಲ್ ನಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ಬಾಯಿಮುಚ್ಚಿಕೊಂಡು ಕೇಳಿಸಿಕೊಳ್ಳಬೇಕು. ದೇಶವನ್ನು ಅರ್ಥಮಾಡಿಕೊಳ್ಳದ ಮಾಧ್ಯಮಗಳು ವಿಪಕ್ಷಗಳಂತೆ ವರ್ತಿಸಿ ನಮ್ಮ ತೇಜೋವಧೆ ಮಾಡುತ್ತಿವೆ ಎಂದು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಏಕೆ ಅಮೆರಿಕಾ ಅಧ್ಯಕ್ಷರಾದರು ಎಂಬದನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲ, ಎಂದು ಹೇಳಿರುವ ಬನ್ನಾನ್ ಕಳೆದ ನವೆಂಬರ್ ನಲ್ಲಿ ನಡೆದ ಅಮೆರಿಕಾ ಅಧ್ಯಕ್ಷಿಯ ಚುನಾವಣೆ ಪ್ರಚಾರವನ್ನು ಆಯ್ದ ಕೆಲವೊಂದು ಮಾಧ್ಯಮಗಳು ತಪ್ಪಾಗಿ ಪ್ರಸಾರ ಮಾಡಿವೆ. ಆದರೆ ಮಾಧ್ಯಮಗಳು ಸೇರಿದಂತೆ ಯಾರೊಬ್ಬರಿಂದಲೂ ನಮ್ಮ ಚುನಾವಣಾ ಪ್ರಚಾರವನ್ನು ತಪ್ಪಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮಗಳದ್ದು ಝೀರೋ ಇಂಟರ್ ಗ್ರಿಟಿ,  ಝೀರೋ ಇಂಟಲಿಜೆನ್ಸ್, ಹಾಗೂ ಮಾಧ್ಯಮಗಳು ಹಾರ್ಡ್ ವರ್ಕ್ ಮಾಡುವುದಿಲ್ಲ, ಅದು ಡೆಮಾಕ್ರಟಿಕ್ ಪಾರ್ಟಿಯಲ್ಲ, ಆಪೋಸಿಸನ್ ಪಾರ್ಟಿ ಎಂದು ಕಿಡಿಕಾರಿದ್ದಾರೆ. ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವಿನಲ್ಲಿ ಸ್ಟೀಫನ್ ಬ್ಯಾನ್ ಪ್ರಮುಖ ಪಾತ್ರ ವಹಿಸಿದ್ದರು.

SCROLL FOR NEXT