ಕಾಣೆಯಾಗಿದ್ದ ಪಾಕಿಸ್ತಾನ ಬ್ಲಾಗರ್ ಸಲ್ಮಾನ್ ಹೈದರ್ ಪತ್ತೆ 
ವಿದೇಶ

ಕಾಣೆಯಾಗಿದ್ದ ಪಾಕಿಸ್ತಾನ ಬ್ಲಾಗರ್ ಸಲ್ಮಾನ್ ಹೈದರ್ ಪತ್ತೆ

ಕಾಣೆಯಾಗಿದ್ದ ಪಾಕಿಸ್ತಾನ ಬ್ಲಾಗರ್ ಸಲ್ಮಾನ್ ಹೈದರ್ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.

ಇಸ್ಲಮಾಬಾದ್: ಕಾಣೆಯಾಗಿದ್ದ ಪಾಕಿಸ್ತಾನ ಬ್ಲಾಗರ್ ಸಲ್ಮಾನ್ ಹೈದರ್ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ. 
ಧಾರ್ಮಿಕ ಮೂಲಭೂತವಾದ ಮತ್ತು ಕಾರ್ಯಕರ್ತರನ್ನು ಹತ್ತಿಕ್ಕುವ ಪಾಕಿಸ್ತಾನಿ ಅಧಿಕಾರಿಗಳ ವಿರುದ್ಧ ತೀವ್ರವಾಗಿ ಟೀಕೆ ಮಾಡುತ್ತಿದ್ದ ಕವಿ ಮತ್ತು ತಜ್ಞ ಹೈದರ್ ಜನವರಿ ೮ ರಿಂದ ಇಸ್ಲಮಾಬಾದ್ ನಿಂದ ಕಾಣೆಯಾಗಿದ್ದರು. ಅವರನ್ನು ಪತ್ತೆ ಹಚ್ಚುವುದಕ್ಕೆ ಹಲವು ಅಭಿಯಾನಗಳು ನಂತರ ಪ್ರಾರಂಭವಾಗಿದ್ದವು. 
ಪಾಕಿಸ್ತಾನದಲ್ಲಿ ಇತ್ತೀಚಿಗೆ ಕನಿಷ್ಠ ಐವರು ಬ್ಲಾಗರ್ ಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಕಾಣೆಯಾಗಿದ್ದಾರೆ ಮತ್ತು ಅವರಲ್ಲಿ ಹೈದರ್ ಜನಪ್ರಿಯ ವ್ಯಕ್ತಿ. ಕಾಣೆಯಾದ ಉಳಿದ ಜನರು ಕೂಡ ಸಂಘಟಿತ ಧರ್ಮ, ಪಾಕಿಸ್ತಾನದಲ್ಲಿ ಧರ್ಮಗುರುಗಳು ಪ್ರಭಾವ ಮತ್ತು ದೇಶದ ಬಲವಾದ ಮಿಲಿಟರಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಟೀಕಿಸುತ್ತಿದ್ದವರೇ.
ಹೈದರ್ ಕುಟುಂಬ ಈಗ ತಿಳಿಸಿರುವಂತೆ, ಹೈದರ್ ತಮ್ಮ ಗೆಳೆಯರೊಂದಿಗೆ ಬನಿ ಗಾಲ ದಲ್ಲಿದ್ದು ಶೀಘ್ರದಲ್ಲೇ ಹಿಂದಿರುಗುವುದಾಗಿ ತಮ್ಮ ಪತ್ನಿಗೆ ತಿಳಿಸಿದ್ದಾರೆ. ಆದರೆ ನಂತರ ಅವರು ಮೊಬೈಲ್ ಸಂದೇಶವನ್ನು ಪಡೆದಿದ್ದು, ಕೋರಲ್ ಚೌಕ್ ನಿಂದ ಕಾರಿನಲ್ಲಿ ಕರೆದುಕೊಂಡು ಹೋಗುವಂತೆ ಹೈದರ್ ತಿಳಿಸಿದ್ದಾರೆ. 
ಈ ಕಾರ್ಯಕರತರನ್ನು ಸುರಕ್ಷಿತವಾಗಿ ಪತ್ತೆ ಹಚ್ಚುವುದಕ್ಕೆ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ನೂರಾರು ಜನ ಪ್ರತಿಭಟಿಸಿದ್ದರು. ವಿರೋಧವನ್ನು ಹತ್ತಿಕ್ಕುವುದಕ್ಕೆ, ಈ ವ್ಯಕ್ತಿಗಳು ಕಾಣೆಯಾದ್ದಕ್ಕೆ ದೇಶದ ಬೇಹುಗಾರಿಕಾ ಸಂಸ್ಥೆ ಐ ಎಸ್ ಐ ಕೈವಾಡವಿದೆ ಎಂದು ಸಂಬಂಧಿಕರು ಮತ್ತು ಮಾನವ ಹಕ್ಕುಗಳ ಸಂಸ್ಥೆಗಳು ದೂರಿದ್ದವು. 
ಈ ಅಪಹರಣಗಳಿಗೆ ಯಾವುದೇ ಸಂಸ್ಥೆ ಹೊಣೆ ಹೊತ್ತಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!