ವಿದೇಶ

ನೇಪಾಳದಲ್ಲಿ ಸಾರ್ಕ್ ಸದಸ್ಯ ರಾಷ್ಟ್ರಗಳ ಉನ್ನತ ಮಟ್ಟದ ಸಭೆ

Srinivas Rao BV
ಕಠ್ಮಂಡು: ಸಾರ್ಕ್ ಸದಸ್ಯ ರಾಷ್ಟ್ರಗಳ ಹಿರಿಯ ಅಧಿಕಾರಿಗಳು ನೇಪಾಳದಲ್ಲಿ ಈ ವಾರ ಸಭೆ ನಡೆಸಲಿದ್ದಾರೆ. 
ಯೋಜನಾ ಸಮಿತಿಯ ಸಭೆ ಇದಾಗಿರಲಿದ್ದು, ಪಾಕಿಸ್ತಾನದಲ್ಲಿ 2016 ರ ನವೆಂಬರ್ ನಲ್ಲಿ ನಡೆಯಬೇಕಿದ್ದ 19 ನೇ ಸಾರ್ಕ್ ಸಮ್ಮೇಳನ ರದ್ದುಗೊಂಡ ನಂತರ ನಡೆಯುತ್ತಿರುವ ಸಭೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಸಭೆಯಲ್ಲಿ ಸಾರ್ಕ್ ನ ಆಡಳಿತ ಕಚೇರಿಯ ಬಜೆಟ್ ಹಾಗೂ ಪ್ರಾದೇಶಿಕ ಕೇಂದ್ರಗಳ ಬಗ್ಗೆ ಸಭೆಯಲ್ಲಿ ಮುಖ್ಯವಾಗಿ ಚರ್ಚೆ ನಡೆಯಲಿದೆ ಎಂದು ನೇಪಾಳದ ವಿದೇಶಾಂಗ ಇಲಾಖೆ ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಇಸ್ಲಾಮಾಬಾದ್ ನಲ್ಲಿ 2016 ರ ನವೆಂಬರ್ 9-10 ರ ವರೆಗೆ ನಡೆಯಬೇಕಿದ್ದ ಸಾರ್ಕ್ ರಾಷ್ಟ್ರಗಳ ಸಮ್ಮೇಳನವನ್ನು ಪಾಕಿಸ್ತಾನದ ಭಯೋತ್ಪಾದನೆಯನ್ನು ವಿರೋಧಿಸಿ ಭಾರತ ಬಹಿಷ್ಕರಿಸಿತ್ತು. ಭಾರತ ಬಹಿಷ್ಕರಿಸಿದ್ದ ಬೆನ್ನಲ್ಲೇ ಅಫ್ಘಾನಿಸ್ತಾನ, ಭೂತಾನ್, ಬಾಂಗ್ಲಾದೇಶ ಸಹ ಸಾರ್ಕ್ ಸಮ್ಮೇಳನವನ್ನು ಬಹಿಷ್ಕರಿಸಿದ್ದವು. ಆದರೆ ಈಗ ಪಾಕಿಸ್ತಾನ ಮತ್ತೆ ಸಮ್ಮೇಳನವನ್ನು ನಡೆಸುವ ಆಶಾವಾದ ವ್ಯಕ್ತಪಡಿಸಿದೆ. 
SCROLL FOR NEXT