ವಿದೇಶ

ಡೊನಾಲ್ಡ್ ಟ್ರಂಪ್ ಹೇಳಿಕೆ: ಅಮೆರಿಕಾ ಡಾಲರ್ ಮೌಲ್ಯ ಕುಸಿತ

Sumana Upadhyaya
ಸಿಡ್ನಿ: ವ್ಯಾಪಾರದಲ್ಲಿ ಲಾಭ ಪಡೆಯಲು ಜರ್ಮನಿ ಮತ್ತು ಜಪಾನ್ ದೇಶದ ಸರ್ಕಾರಗಳು ತಮ್ಮ ಕರೆನ್ಸಿಗಳನ್ನು ಅಪಮೌಲೀಕರಿಸುತ್ತದೆ ಎಂದು ಅಮೆರಿಕಾದ ಡೊನಾಲ್ಡ್ ಟ್ರಂಪ್ ಸರ್ಕಾರ ಆರೋಪಿಸಿದ ಕೂಡಲೇ ಏಷ್ಯಾದಲ್ಲಿ ಡಾಲರ್ ಮೌಲ್ಯ ಹೆಚ್ಚಾಗಿದೆ. ಅಮೆರಿಕಾದಲ್ಲಿ ಮಾತ್ರ ಕಳೆದ ಮೂರು ದಶಕಗಳಲ್ಲಿ ಈ ಜನವರಿಯಲ್ಲಿ ಕರೆನ್ಸಿ ಮೌಲ್ಯ ತೀವ್ರ ಕುಸಿದಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತರ ದೇಶಗಳು ಅಪಮೌಲೀಕರಣದಲ್ಲಿ ವಾಸಿಸುತ್ತಿವೆ ಎಂದು ಆಪಾದಿಸಿದ್ದರು.
ತನ್ನ ವ್ಯಾಪಾರಿ ಪಾಲುದಾರರನ್ನು ಶೋಷಿಸಲು ಯೂರೋವನ್ನು ಜರ್ಮನಿ ಅಪಮೌಲ್ಯಗೊಳಿಸುತ್ತಿದೆ ಎಂದು ಟ್ರಂಪ್ ಅವರ ಉದ್ಯಮ ಸಲಹೆಗಾರ ಹೇಳಿಕೆ ನೀಡಿದ ಸ್ವಲ್ಪ ಹೊತ್ತಿನಲ್ಲಿಯೇ ಅಮೆರಿಕಾದ ಡಾಲರ್ ಮೌಲ್ಯ ಕುಸಿದಿದೆ. 
ನಿನ್ನೆಯ ವಹಿವಾಟಿನಲ್ಲಿ ಯೆನ್ ಮೌಲ್ಯ 112.08ರಿಂದ 112.94ಕ್ಕೆ ಏರಿಕೆಯಾಗಿದೆ. ನಿನ್ನೆ ಸಂಜೆಯ ವೇಳೆಗೆ ಅದು 115.01ಕ್ಕೆ ತಲುಪಿತ್ತು.
SCROLL FOR NEXT