ವಿಜಯ್ ಮಲ್ಯ 
ವಿದೇಶ

ವಿಜಯ್ ಮಲ್ಯ ಹಸ್ತಾಂತರ ಪ್ರಕರಣ: ಅಂತಿಮ ವಿಚಾರಣೆ ದಿನಾಂಕ ಡಿ.4ಕ್ಕೆ ನಿಗದಿಪಡಿಸಿದ ಇಂಗ್ಲೆಂಡ್ ಕೋರ್ಟ್

ಹಸ್ತಾಂತರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಂತಿಮ ವಿಚಾರಣೆ ದಿನಾಂಕವನ್ನು ಮುಂದಿನ ವರ್ಷಕ್ಕೆ...

ಲಂಡನ್: ಹಸ್ತಾಂತರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಂತಿಮ ವಿಚಾರಣೆ ದಿನಾಂಕವನ್ನು ಮುಂದಿನ ವರ್ಷಕ್ಕೆ ಬದಲಾಯಿಸುವಂತೆ ಮದ್ಯ ದೊರೆ ವಿಜಯ್ ಮಲ್ಯ  ಮಾಡಿಕೊಂಡ ಮನವಿಯನ್ನು  ಇಂಗ್ಲೆಂಡ್ ನ್ಯಾಯಾಲಯ ತಿರಸ್ಕರಿಸಿ ಈ ವರ್ಷ ಡಿ. 4ಕ್ಕೆ ನಿಗದಿಪಡಿಸಿದೆ.
ಕಿಂಗ್ ಫಿಶರ್ ಏರ್ ಲೈನ್ಸ್ ನಲ್ಲಿ ಸುಮಾರು 9 ಸಾವಿರ ಕೋಟಿ ರೂಪಾಯಿ ಬ್ಯಾಂಕ್ ಸಾಲ ಮರುಪಾವತಿಗೆ ಸಂಬಂಧಪಟ್ಟಂತೆ ಭಾರತಕ್ಕೆ ಬೇಕಾಗಿರುವ ವಿಜಯ್ ಮಲ್ಯ ಕಳೆದ ವರ್ಷ ಮಾರ್ಚ್ ತಿಂಗಳಿನಿಂದ ಇಂಗ್ಲೆಂಡ್ ನಲ್ಲಿದ್ದಾರೆ. ಕಳೆದ ಏಪ್ರಿಲ್ 18ರಂದು ಹಸ್ತಾಂತರ ವಾರಂಟ್ ನಲ್ಲಿ ಸ್ಕಾಟ್ ಲ್ಯಾಂಡ್ ಯಾರ್ಡ್ ವಿಜಯ್ ಮಲ್ಯರನ್ನು ಬಂಧಿಸಿತ್ತು.
ಭಾರತ ಸರ್ಕಾರದ ಪರವಾಗಿ ವಿಜಯ್ ಮಲ್ಯ ಕೇಸಿನಲ್ಲಿ ವಾದಿಸುವ ಕ್ರೌನ್ ಪ್ರಾಸಿಕ್ಯೂಷನ್ ಸೇವೆ  ಲಂಡನ್ ನ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ  ಹೇಳಿಕೆ ನೀಡಿ, ಕೇಸಿನಲ್ಲಿ ಭಾರತೀಯ ಅಧಿಕಾರಿಗಳಿಗೆ ಉತ್ತಮ ಸಹಕಾರ ನೀಡುತ್ತಿದ್ದು 61 ವರ್ಷದ ವಿಜಯ್ ಮಲ್ಯ ಅವರನ್ನು ಗಡೀಪಾರು ಮಾಡಲು ಸಾಕಷ್ಟು ಸಾಕ್ಷ್ಯಗಳು ಮೇಲ್ನೋಟಕ್ಕೆ ಕಂಡುಬರುತ್ತಿವೆ ಎಂದು ತಿಳಿಸಿದ್ದಾರೆ.
ವಿಚಾರಣೆಗೆ ಸಂಬಂಧಪಟ್ಟ ಸಾಕ್ಷಿಗಳ ಪರಾಮರ್ಶೆಯನ್ನು ನಾವು ಮುಗಿಸಿದ್ದು ಈ ಕೇಸಿನಲ್ಲಿ ಭಾರತೀಯ ಅಧಿಕಾರಿಗಳೊಂದಿಗೆ ಉತ್ತಮ ಸಹಕಾರ ಹೊಂದಿದ್ದೇವೆ ಎಂದು ಸಿಪಿಎಸ್ ನ್ಯಾಯವಾದಿ ಮಾರ್ಕ್ ಸಮ್ಮರ್ಸ್ ನ್ಯಾಯಾಧೀಶರಿಗೆ ತಿಳಿಸಿದ್ದಾರೆ. ನಾವು ಸಿದ್ಧವಾಗಿದ್ದು ವಿಚಾರಣೆ ಮುಂದುವರಿಸಲು ಸಿದ್ಧರಿದ್ದೇವೆ. ಆದಷ್ಟು ಬೇಗ ವಿಚಾರಣೆ ದಿನಾಂಕವನ್ನು ನಿಗದಿಪಡಿಸಲು ಆಹ್ವಾನಿಸುತ್ತೇವೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP