ವಿದೇಶ

ಪತ್ನಿಯೊಂದಿಗೆ ಶಾಪಿಂಗ್ ತೆರಳುವ ಪುರುಷರ ಸಂಕಷ್ಟಕ್ಕೆ ಚೀನಾದಲ್ಲಿ ವಿನೂತನ ಪರಿಹಾರ!

Srinivas Rao BV
ಶಾಂಘೈ: ಶಾಪಿಂಗ್ ಮಾಲ್ ಗಳಲ್ಲಿ ಪತ್ನಿ ತೆರಳುವ ಮಳಿಗೆಗಳಿಗೆಲ್ಲಾ ಪತಿ ಹಿಂಬಾಲಿಸುವುದು ವಿಶ್ವಾದ್ಯಂತ ಕಂಡು ಬರುವುದು ಸಹಜ ದೃಶ್ಯ. ಆದರೆ ಇದಕ್ಕೆ ಚೀನಾ ಪರಿಹಾರ ಕಂಡುಕೊಂಡಿದ್ದು, ಪತ್ನಿಯೊಂದಿಗೆ ಆಗಮಿಸುವ ಪತಿಗಾಗಿ ಚೀನಾದ ಶಾಪಿಂಗ್ ಮಾಲ್ ಗಳಲ್ಲಿ ಹಸ್ಬೆಂಡ್ ರೆಸ್ಟ್ ಬೂತ್ ಗಳನ್ನು ಪ್ರಾರಂಭಿಸಲಾಗಿದೆ. 
ಮಸಾಜ್ ಚೇರ್ ಹಾಗೂ ಕಂಪ್ಯೂಟರ್ ಗೇಮ್ ಗಳ ಸೌಲಭ್ಯಗಳನ್ನು ಶಾಪಿಂಗ್ ಮಾಲ್ ನ ಹಸ್ಬೆಂಡ್ ರೆಸ್ಟ್ ಬೂತ್ ಗಳಲ್ಲಿ ಕಲ್ಪಿಸಲಾಗಿದ್ದು, ಪತ್ನಿ ಶಾಪಿಂಗ್ ಮುಗಿಸಿ ವಾಪಸ್ಸಾಗುವವರೆಗೆ ಪತಿ ಈ ಹಸ್ಬೆಂಡ್ ರೆಸ್ಟ್ ಬೂತ್ ಗಳಲ್ಲಿ ಇರಬಹುದಾಗಿದೆ. ಹಸ್ಬೆಂಡ್ ರೆಸ್ಟ್ ಬೂತ್ ಗಳನ್ನು ಅಭಿವೃದ್ಧಿಪಡಿಸಿರುವವರು ಇದನ್ನು ಭವಿಷ್ಯದ ಮ್ಯಾನ್ ಕೇವ್ಸ್(ಮಾನವ ಗುಹೆ) ಎಂದು ಹೇಳುತ್ತಿದ್ದು, ಸುಮಾರು 40,000 ಯುವಾನ್ ($6,000) ಗಳ ವೆಚ್ಚದಲ್ಲಿ ಈಗಾಗಲೇ ನಾಲ್ಕು ಮಾಲ್ ಗಳಲ್ಲಿ ಸ್ಥಾಪಿಸಲಾಗಿದೆ. ಮೊಬೈಲ್ ಫೋನ್ ಮೂಲಕ ಹಸ್ಬೆಂಡ್ ರೆಸ್ಟ್ ಬೂತ್ ಗಳನ್ನು ಕಾಯ್ದಿರಿಸುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ. 
SCROLL FOR NEXT