ವಿದೇಶ

ಭಾರತೀಯ ಟಿವಿ ಶೋಗಳ ಪ್ರಸಾರಕ್ಕೆ ಹೇರಿದ್ದ ನಿಷೇಧ ತೆರವುಗೊಳಿಸಿದ ಪಾಕಿಸ್ತಾನ ಕೋರ್ಟ್

Sumana Upadhyaya
ಲಾಹೊರ್: ದೇಶದಲ್ಲಿ ಭಾರತೀಯ ಟಿವಿ ಕಾರ್ಯಕ್ರಮಗಳ ಪ್ರಸಾರದ ಮೇಲೆ ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಹೇರಿದ್ದ ನಿಷೇಧವನ್ನು ಲಾಹೊರ್ ಹೈಕೋರ್ಟ್ ತೆರವುಗೊಳಿಸಿದೆ.
ಆಕ್ಷೇಪಾರ್ಹ ಅಥವಾ ಪಾಕಿಸ್ತಾನ ವಿರೋಧಿ ವಿಷಯಗಳನ್ನು ಸೆನ್ಸಾರ್ ಮಾಡಬಹುದು ಆದರೆ ಸಂಪೂರ್ಣ ನಿಷೇಧಿಸುವ ಅಗತ್ಯವಿಲ್ಲ ಎಂದು ಲಾಹೊರ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮನ್ಸೂರ್ ಆಲಿ ಶಾಹ್ ಹೇಳಿದ್ದಾರೆ ಎಂದು nation.com.pk ವರದಿ ಮಾಡಿದೆ.
ಇಂದು ಇಡೀ ವಿಶ್ವ ಗ್ಲೋಬಲ್ ವಿಲೇಜ್ ಆಗಿ ಪರಿವರ್ತನೆಯಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಭಾರತೀಯ ಸಿನಿಮಾಗಳನ್ನು ದೇಶಾದ್ಯಂತ ಪ್ರದರ್ಶನ ಮಾಡಲು ಅವಕಾಶವಿದ್ದರೂ ಕೂಡ ಟಿವಿ ಚಾನೆಲ್ ಗಳಲ್ಲಿ ಪ್ರಸಾರ ಮಾಡಲು ಬಿಡದಿರುವ ಕ್ರಮ ಆಕ್ಷೇಪಣೀಯ ಎಂದು ಅರ್ಜಿದಾರ ಪರ ವಕೀಲ ಅಸ್ಮ ಜೆಹಂಗೀರ್ ವಾದಿಸಿದ್ದರು.
SCROLL FOR NEXT