ಸಂಗ್ರಹ ಚಿತ್ರ 
ವಿದೇಶ

ಮದುವೆಯಾದ ಒಂದೇ ವಾರದಲ್ಲಿ ಆತ್ಮಹತ್ಯೆಗೆ ಯತ್ನಸಿದ್ದ ರಾಣಿ ಡಯಾನಾ!

ಪ್ರಿನ್ಸ್ ಚಾರ್ಲ್ಸ್ ರೊಂದಿಗೆ ಮದುವೆಯಾದ ವಾರದಲ್ಲೇ ರಾಣಿ ಡಯಾನಾ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ರಹಸ್ಯ ಮಾಹಿತಿಯೊಂದು ಇದೀಗ ಸೋರಿಕೆಯಾಗಿದೆ.

ಲಂಡನ್: ಪ್ರಿನ್ಸ್ ಚಾರ್ಲ್ಸ್ ರೊಂದಿಗೆ ಮದುವೆಯಾದ ವಾರದಲ್ಲೇ ರಾಣಿ ಡಯಾನಾ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ರಹಸ್ಯ ಮಾಹಿತಿಯೊಂದು ಇದೀಗ ಸೋರಿಕೆಯಾಗಿದೆ.

ಇಂಗ್ಲೆಂಡ್ ರಾಜಮನೆತನದ ಅದ್ದೂರಿ ಮದುವೆ ಎಂದೇ ಕರೆಯಲಾಗುವ ಪ್ರಿನ್ಸ್ ಚಾರ್ಲ್ಸ್ ಹಾಗೂ ರಾಣಿ ಡಯಾನಾ ಮದುವೆ ವ್ಯಾಪಕ ಸುದ್ದಿಯಾಗಿತ್ತು. ಆದರೆ ಮದುವೆಯಾದ ಕೇವಲ ಒಂದು ವಾರದ ಅವಧಿಯೊಳಗೇ ರಾಣಿ  ಡಯಾನಾ ತಮ್ಮ ಕೈಯಲ್ಲಿನ ಮಣಿಕಟ್ಟನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಇದೀಗ ಬಯಲಾಗಿದೆ. 1991ರಲ್ಲಿ ಸ್ನೇಹಿತನೊಬ್ಬನ ನೆರವಿನೊಂದಿಗೆ ಡಯಾನಾ ಆತ್ಮಹತ್ಯಾ ಟೇಪ್  ಮುದ್ರಿಸಿದ್ದರು ಎಂದು ಹೇಳಲಾಗುತ್ತಿದೆ.

ಸರಿ ಸುಮಾರು 20 ವರ್ಷಗಳ ಕಾಲ ಈ ಟೇಪ್ ಅನ್ನು ಗೌಪ್ಯವಾಗಿಡಲಾಗಿತ್ತು. ಬಳಿಕ ಈ ಟೇಪ್ ಅನ್ನು ಆ್ಯಂಡ್ರ್ಯೂ ಮೋರ್ಟಾನರ ಡಯಾನಾ ಕತೆಯಲ್ಲಿ ಮರು ಪ್ರಕಟಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಿನ್ಸ್ ಚಾರ್ಲ್ಸ್ ಮತ್ತು ಆತನ  ಪ್ರೇಯಸಿ ಕ್ಯಾಮಿಲಾರ ಸಂಬಂಧದಿಂದಾಗಿ ಡಯಾನಾ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಇದೇ ಕಾರಣಕ್ಕೆ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದೂ ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಡದಿ ಟೌನ್​​ಶಿಪ್​​ಗೆ ಒಪ್ಪಿದ ರೈತರು; HDK ವಿರೋಧದ ನಡುವೆ ಜೂನ್ 1 ರಿಂದಲೇ ಹಣ ಬಿಡುಗಡೆ: ಡಿಕೆಶಿ ಮಹತ್ವದ ಘೋಷಣೆ

ಆರ್ಥಿಕತೆ ಎಕ್ಕುಟ್ಟಿ ಹೋಗಲಿ, ಆದ್ರೆ ಮೆಲೋನಿಗೆ 'ಮೆಲೋಡಿ' ಕೊಡುವುದು ತಡವಾಗ್ಬಾರ್ದು: ಖರ್ಗೆ ಕಿಡಿ

ವೈಭವ್ ಸೂರ್ಯವಂಶಿಗೆ, ಕ್ರಿಸ್ ಗೇಲ್ ಸಿಕ್ಸರ್ ದಾಖಲೆ ಮುರಿಯುವ ಸಾಮರ್ಥ್ಯ ಇದೆ: ಅನಿಲ್ ಕುಂಬ್ಳೆ ಹೀಗೆ ಹೇಳಿದ್ಯಾಕೆ?

'ಧುರಂಧರ್-2' ಸೇನಾ ರಹಸ್ಯ ಬಹಿರಂಗಪಡಿಸಿದೆಯೇ?: ಪರಿಶೀಲಿಸುವಂತೆ ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಸೂಚನೆ

43 ವರ್ಷಗಳ ಹಿಂದೆ ಕಳುವಾಗಿದ್ದ 19 ಕೋಟಿ ರೂ. ಮೌಲ್ಯದ 'ಅವಲೋಕಿತೇಶ್ವರ' ಪ್ರತಿಮೆ ಭಾರತಕ್ಕೆ ಹಿಂದಿರುಗಿಸುತ್ತಿದೆ ಅಮೆರಿಕ!

SCROLL FOR NEXT