ಹಗ್ಗದ ಸಹಾಯವಿಲ್ಲದೆ 29 ಅಂತಸ್ತಿನ ಕಟ್ಟಡ ಏರಿದ ಫ್ರೆಂಚ್ 'ಸ್ಪೈಡರ್ ಮ್ಯಾನ್'
ಹಾಲಿವುಡ್ ನ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಒಂದಾಗಿರುವ ಸ್ಪೈಡರ್ ಮ್ಯಾನ್ ಚಿತ್ರ ನೀವೆಲ್ಲಾ ನೋಡಿರುತ್ತೀರಿ. ಅದರಲ್ಲಿ ಸ್ಪೈಡರ್ ಮ್ಯಾನ್ ವೇಷಧಾರಿಯ ರೀಲ್ ಸಾಹಸಗಳನ್ನು...
ಹಾಲಿವುಡ್ ನ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಒಂದಾಗಿರುವ ಸ್ಪೈಡರ್ ಮ್ಯಾನ್ ಚಿತ್ರ ನೀವೆಲ್ಲಾ ನೋಡಿರುತ್ತೀರಿ. ಅದರಲ್ಲಿ ಸ್ಪೈಡರ್ ಮ್ಯಾನ್ ವೇಷಧಾರಿಯ ರೀಲ್ ಸಾಹಸಗಳನ್ನು ನೋಡಿರುತ್ತೀರಾ. ಆದರೆ ಇಲ್ಲೊಬ್ಬ ಆರೋಹಿ ಯಾವುದೇ ಹಗ್ದದ ಸಹಾಯವಿಲ್ಲದೆ 29 ಅಂತಸ್ತಿನ ಕಟ್ಟಡವನ್ನು ಹತ್ತುವ ಮೂಲಕ ರಿಯಲ್ ಸ್ಪೈಡರ್ ಮ್ಯಾನ್ ಎನಿಸಿಕೊಂಡಿದ್ದಾರೆ.
ಬರ್ಸಿಲೊನಾದಲ್ಲಿರುವ 29 ಅಂತಸ್ತಿನ ಬರ್ಸಿಲೊನಾ ಸ್ಕೈ ಹೊಟೇಲ್ ಕಟ್ಟಡವನ್ನು 54 ವರ್ಷದ ಆರೋಹಿ ಅಲೈನ್ ರಾರ್ಬಟ್ ಬರೀ ಕೈಯಲ್ಲಿ ಕೇವಲ 20 ನಿಮಿಷಗಳಲ್ಲಿ ಏರುವ ಮೂಲಕ ಸಾದನೆ ಮಾಡಿದ್ದಾರೆ.
ರಾರ್ಬಟ್ ಕಟ್ಟವನ್ನು ಏರಿರುವ ವಿಡಿಯೋ ಇದೀಗ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ವೈರಲ್ ಆಗಿದೆ. ಇನ್ನು ರಾರ್ಬಟ್ ಯಾವುದೇ ಪರವಾನಗಿ ಪಡೆಯದೇ ಕಟ್ಟಡ ಏರಿರುವುದರಿಂದ ಕಟ್ಟಡವನ್ನು ಏರಿದ ಮೇಲೆ ಆತನನ್ನು ಪೊಲೀಸರು ಪ್ರಶ್ನಿಸಿದ್ದು ನಂತರ ಬಿಟ್ಟುಕಳುಹಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.