ವಿದೇಶ

ಫ್ರಿಡ್ಜ್ ಸ್ಫೋಟವೇ ಲಂಡನ್ ಗ್ರೆನ್ ಫೆಲ್ ಟವರ್ ಅಗ್ನಿ ದುರಂತಕ್ಕೆ ಕಾರಣ?

Srinivasamurthy VN

ಲಂಡನ್: ಸುಮಾರು 13 ಮಂದಿಯ ಸಾವಿಗೆ ಕಾರಣವಾದ ಲಂಡನ್ ನ ವಸತಿ ಸಮುಚ್ಛಯದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡಕ್ಕೆ ಫ್ರಿಡ್ಜ್ ಸ್ಫೋಟವೇ ಕಾರಣ ಎಂದು ಹೇಳಲಾಗುತ್ತಿದೆ.

ಲಂಡನ್ ಪೊಲೀಸರು ನಡೆಸಿರುವ ಪ್ರಾಥಮಿಕ ತನಿಖೆಯಾಧಾರಿತ ತಿಳಿದುಬಂದ ಅಂಶಗಳ ಅನ್ವಯ ನಾರ್ಥ್ ಕೆನ್ಸಿಂಗ್ಟನ್ ನಲ್ಲಿರುವ ಲಾಟಿಮರ್ ರಸ್ತೆಯ ಲ್ಯಾಂಕೆಸ್ಟರ್ ವೆಸ್ಟ್ ಎಸ್ಟೇಟ್ ನ ಆವರಣದಲ್ಲಿರುವ ಗ್ರೆನ್ ಫೆಲ್ ಟವರ್  ಕಟ್ಟಡದ ನಾಲ್ಕನೇ ಅಂತಸ್ತಿನ ಆಪಾರ್ಟ್ ಮೆಂಟ್ ವೊಂದರಿಂದ ಪ್ರಿಡ್ಜ್ ಸ್ಫೋಟವಾದ ಶಬ್ದ ಕೇಳಿತ್ತು. ಸ್ಫೋಟದಿಂದಾಗಿ ಹೊತ್ತಿದ್ದ ಬೆಂಕಿ ಬಳಿಕ ಇಡೀ ಕಟ್ಟಡವನ್ನು ಆವರಿಸಿತ್ತು ಎಂದು ತಿಳಿದುಬಂದಿದೆ.

ಆಪಾರ್ಟ್ ಮೆಂಟ್ ನ ನಾಲ್ಕನೇ ಟವರ್ ನ ನಿವಾಸಿ ಸೋಫಿಯಾ ವಾಲ್ಡನ್ ಎಂಬುವವರು ನೀಡಿರುವ ಮಾಹಿತಿಯಂತೆ ತಮ್ಮ ಪಕ್ಕತ ಆಪಾರ್ಟ್ ಮೆಂಟ್ ನ ವ್ಯಕ್ತಿಯೊಬ್ಬರು ಪ್ರಿಡ್ಜ್ ಸ್ಫೋಟವಾದ ಬಗ್ಗೆ ಹೊರಗೆ ಬಂದು ಹೇಳುತ್ತಿದ್ದರು.  ಇದಾದ ಕೆಲವೇ ನಿಮಿಷಗಳಲ್ಲಿ ಬೆಂಕಿ ಹೊತ್ತಿಕೊಂಡಿತ್ತು ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಗ್ನಿಶಾಮಕ ಸಿಬ್ಬಂದಿ ಈಗಷ್ಟೇ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಪ್ರಸ್ತುತ ತನಿಖೆ  ನಡೆಸಲಾಗುತ್ತಿದ್ದು, ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕನಿಷ್ಟ 12 ಮಂದಿ ಸಾವು
ಇನ್ನು ಗ್ರೆನ್ ಫೆಲ್ ಟವರ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಢದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 12ಕ್ಕೇರಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಕಟ್ಟಡದಲ್ಲಿ ಬೆಂಕಿ  ನಂದಿಸಲಾಗಿದೆಯಾದರೂ, ತಟ್ಟಡದ ಅವಶೇಷಗಳಡಿಯಲ್ಲಿ ಯಾರಾದರೂ ಇದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

SCROLL FOR NEXT