ವಿದೇಶ

ಕಾಶ್ಮೀರದಲ್ಲಿ ಅಸ್ಥಿರತೆಯನ್ನು ಹೆಚ್ಚಿಸಿ: ಪಾಕ್ ಮಾಧ್ಯಮಗಳಿಗೆ 26/11 ದಾಳಿ ರೂವಾರಿ ಉಗ್ರನ ಒತ್ತಾಯ

Srinivas Rao BV
ಇಸ್ಲಾಮಾಬಾದ್: ಕಾಶ್ಮೀರದಲ್ಲಿರುವ ಅಸ್ಥಿರತೆಯನ್ನು ಹೆಚ್ಚಿಸಿ ಎಂದು ಪಾಕಿಸ್ತಾನ ಮಾಧ್ಯಮಗಳಿಗೆ 2008 ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಅಬ್ದುಲ್ ರೆಹಮಾನ್ ಮಕ್ಕಿ ಒತ್ತಾಯಿಸಿದ್ದಾನೆ. 
ಫೈಸ್ಲಾಬಾದ್ ದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅಬ್ದುಲ್ ರೆಹಮಾನ್ ಮಕ್ಕಿ, ಬರವಣಿಗೆಯ ಶಕ್ತಿಯ ಮೂಲಕ ಕಾಶ್ಮೀರದ ಉದ್ದೇಶಕ್ಕೆ ಕೈ ಜೋಡಿಸುವಂತೆ ಕೇಳಿದ್ದಾರೆ. ಕಳೆದ ವರ್ಷ ಜುಲೈ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬುರ್ಹಾನ್ ವಾನಿಯ ಹತ್ಯೆಯ ನಂತರ ಕಾಶ್ಮೀರದಲ್ಲಿ ಅಸ್ಥಿರತೆ ಉಂಟಾಗಿದೆ. ಅಬ್ದುಲ್ ರೆಹಮಾನ್ ಮಕ್ಕಿ ಜೆಡಿಯು ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನ ಸಹೋದರನಾಗಿದ್ದು, ಮಕ್ಕಿಯ ತಲೆಗೆ 2 ಮಿಲಿಯನ್ ಬಹುಮಾನ ಘೋಷಿಸಲಾಗಿದೆ. 
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರ ಮಾರ್ಚ್ ನಲ್ಲಿ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಆಗಿರುವ ಮಕ್ಕಿಯನ್ನು ಗೃಹಬಂಧನಕ್ಕೊಳಪಡಿಸಿತ್ತು. 
SCROLL FOR NEXT