ರಿಯಾದ್: ಮುಸ್ಲಿಂರ ಪವಿತ್ರ ನಗರ ಮೆಕ್ಕಾದಲ್ಲಿನ ಮಹಾ ಮಸೀದಿಯನ್ನು ಸ್ಫೋಟಗೊಳಿಸುವ ಉಗ್ರರ ಯತ್ನವನ್ನು ಸೌದಿ ಅರೇಬಿಯಾ ಪೊಲೀಸರು ವಿಫಲಗೊಳಿಸಿದ್ದಾರೆ.
ರಂಜಾನ್ ಮುಸ್ಲಿಂರ ಪಾಲಿಗೆ ಅತ್ಯಂತ ಪವಿತ್ರವಾದ ಮಾಸವಾಗಿದ್ದು ಈ ಹಿನ್ನೆಲೆಯಲ್ಲಿ ಮೆಕ್ಕಾದ ಮಹಾ ಮಸೀದಿಯಲ್ಲಿ ಲಕ್ಷಾಂತರ ಜನರು ಸೇರುತ್ತಿದ್ದು ಈ ಹಿನ್ನೆಲೆಯಲ್ಲಿ ಉಗ್ರರು ಆತ್ಮಾಹುತಿ ಬಾಂಬ್ ದಾಳಿಯ ಮೂಲಕ ಮಹಾ ಮಸೀದಿಯನ್ನು ಸ್ಫೋಟಗೊಳಿಸುವ ಯತ್ನ ಮಾಡಿದ್ದು ಇದನ್ನು ಸೌದಿ ಪೊಲೀಸರು ವಿಫಲಗೊಳಿಸಿದ್ದು ದೊಡ್ಡ ಅನಾಹುತವೊಂದನ್ನು ತಡೆದಿದ್ದಾರೆ.
ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಯಲು ಬಂದಿದ್ದ ಓರ್ವ ಮಹಿಳೆ ಸೇರಿದಂತೆ ಐವರನ್ನು ಸೌದಿ ಪೊಲೀಸರು ಬಂಧಿಸಿದ್ದಾರೆ ಎಂದು ಸೌದಿ ಆಂತರಿಕ ಸಚಿವಾಲಯದ ವಕ್ತಾರ ಮನ್ಸೂರ್ ಅಲ್ ತುರ್ಕಿ ಹೇಳಿರುವುದಾಗಿ ಅಲ್ ಅರಾಬಿಯಾ ವೆಬ್ ಸೈಟ್ ವರದಿ ಮಾಡಿದೆ.
ಮೂರು ಭಯೋತ್ಪಾದಕರ ಗುಂಪುಗಳು ಆತ್ಮಾಹುತಿ ಬಾಂಬ್ ದಾಳಿಗೆ ಯತ್ನಿಸಿದ್ದು ಅದರಲ್ಲಿ ಎರಡು ಗುಂಪು ಮೆಕ್ಕಾದಲ್ಲಿ ಮತ್ತೊಂದು ಗುಂಪು ಜಿದ್ದಾದಲ್ಲಿ ದಾಳಿಗೆ ಮುಂದಾಗಿದ್ದವು ಎಂದು ಮನ್ಸೂರ್ ಅಲ್ ತುರ್ಕಿ ಹೇಳಿದ್ದಾರೆ.