ವಿದೇಶ

ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಚೀನಾ ಮತ್ತೆ ಅಡ್ಡಿ

Lingaraj Badiger
ಬರ್ನ್(ಸ್ವಿಜರ್ಲ್ಯಾಂಡ್): ಪರಮಾಣು ಸರಬರಾಜು ಗುಂಪು(ಎನ್ ಎಸ್ ಜಿ) ಸೇರುವ ಭಾರತದ ಪ್ರಯತ್ನಕ್ಕೆ ಚೀನಾ ಮತ್ತೆ ಅಡ್ಡಿಪಡಿಸಿದ್ದು, ಶನಿವಾರ ಅಂತ್ಯಗೊಂಡ 27ನೇ ಎನ್ ಎಸ್ ಜಿ ಸರ್ವ ಸದಸ್ಯರ ಯೋಜನಾ ಸಭೆಯಲ್ಲಿ ನವದೆಹಲಿಗೆ ಯಾವುದೇ ಸಿಹಿ ಸುದ್ದಿ ನೀಡಿಲ್ಲ.
48 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಎನ್‌ ಎಸ್‌ಜಿ ವಿಸ್ತರಣೆ ಸಂದರ್ಭ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ(ಎನ್‌ಪಿಟಿ) ಭಾರತ ಸಹಿ ಹಾಕಿಲ್ಲ. ಹೀಗಾಗಿ ಭಾರತಕ್ಕೆ ಎನ್ ಎಸ್ ಜಿ ಸದಸ್ಯ ಬೇಡ ಎಂದು ಚೀನಾ ವಾದಿಸುತ್ತಿದೆ.
ವಿಶ್ವದ ಅಣ್ವಸ್ತ್ರ ಮಾರಾಟವನ್ನು ನಿಯಂತ್ರಿಸುವ ಎನ್ ಎಸ್ ಜಿ ಸದಸ್ಯತ್ವ ನೀಡುವ ಭಾರತದ ಮನವಿಗೆ ಚೈನಾ ಮೊದಲಿನಿಂದಲೂ ಅಡ್ಡಗಾಲು ಹಾಕುತ್ತಾ ಬಂದಿದ್ದು, ಇತ್ತೀಚಿಗಷ್ಟೆ ಎನ್ ಎಸ್ ಜಿ ಯಲ್ಲಿ ಎನ್ ಪಿಟಿ ಒಪ್ಪಿಕೊಳ್ಳದ ಸದ್ಯಸ್ಯರು ಭಾಗವಹಿಸುವುದರ ಬಗ್ಗೆ ಚೈನಾ ನಿಲುವು ಬದಲಾಗಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುಆ ಚುಂಯಿಂಗ್ ಹೇಳಿದ್ದರು.
SCROLL FOR NEXT