ವಿದೇಶ

ವಾಷಿಂಗ್ಟನ್: ಸಿನ್ಸಿನ್ನಾಟಿ ನೈಟ್ ಕ್ಲಬ್ ನಲ್ಲಿ ಶೂಟೌಟ್; ಓರ್ವ ಸಾವು, 15 ಮಂದಿಗೆ ಗಾಯ

Sumana Upadhyaya
ವಾಷಿಂಗ್ಟನ್: ಅಮೆರಿಕಾದ ಒಹಿಯೊದ ನೈಟ್ ಕ್ಲಬ್ ವೊಂದರಲ್ಲಿ ಭಾನುವಾರ ಮುಂಜಾನೆ ಶೂಟೌಟ್ ನಡೆದಿದ್ದು,ಒಬ್ಬ ಮೃತಪಟ್ಟು ಇತರ 15 ಮಂದಿ ಗಾಯಗೊಂಡಿದ್ದಾರೆ.
ವಾಷಿಂಗ್ಟನ್ ಸಮೀಪದ ಸಿನ್ಸಿನ್ನಾಟಿ ನಗರದ ಸಮೀಪವಿರುವ ಕೆಲ್ಲೊಗ್ ಅವೆನ್ಯೂನಲ್ಲಿರುವ ಕೆಮಿಯೊ ನೈಟ್ ಕ್ಲಬ್ ನಲ್ಲಿ ಬಂದೂಕುಧಾರಿಗಳು ಮುಸುಕು ಹಾಕಿಕೊಂಡು ಬಂದು ದಾಳಿ ನಡೆಸಿದರು ಎಂದು ಡಬ್ಲ್ಯುಎಲ್ ಡಬ್ಲ್ಯುಟಿ5 ನ್ಯೂಸ್ ವರದಿ ಮಾಡಿದೆ. 
ಸಿನ್ಸಿನಾಟಿ ಪೊಲೀಸರು ಸುದ್ದಿಯನ್ನು ಖಚಿತಪಡಿಸಿದ್ದಾರೆ. ಈ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಹೆಚ್ಚಿನ ಮಾಹಿತಿ ನೀಡಿಲ್ಲ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ತುರ್ತುಸೇವಾ ವಿಭಾಗದವರು ಧಾವಿಸಿ ಗಾಯಗೊಂಡವರ ರಕ್ಷಣೆಗೆ ಮುಂದಾದರು.
ಈ ವರ್ಷದ ಆರಂಭದಲ್ಲಿ ಫ್ಲೋರಿಡಾದ ಒರ್ಲೆಂಡೊದಲ್ಲಿ ನೈಟ್ ಕ್ಲಬ್ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ 49 ಮಂದಿ ಮೃತಪಟ್ಟು 53 ಜನ ಗಾಯಗೊಂಡಿದ್ದರು. ಈ ಘಟನೆ ಇನ್ನೂ ಹಚ್ಚಹಸಿರಾಗಿರುವಾಗಲೇ ಇಂದು ಬೆಳಗ್ಗೆ ಮತ್ತೆ ನೈಟ್ ಕ್ಲಬ್ ಮೇಲೆ ದಾಳಿ ನಡೆದಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
SCROLL FOR NEXT