ಕರಾಚಿ: ಪಾಕಿಸ್ತಾನದ ಹೆಸರಾಂತ ಸಿತಾರ್ ವಾದಕ ಉಸ್ತಾದ್ ರಯೀಸ್ ಖಾನ್ ವಿಧಿವಶರಾಗಿದ್ದಾರೆ.
77 ವರ್ಷದ ರಯೀಸ್ ಖಾನ್ ಅವರು ವಿಧಿವಶರಾಗಿದ್ದು ಪತ್ನಿ ಗಾಯಕಿ ಬಿಲ್ಕಿಸ್ ಖಾನಮ್ ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.
ಮಧ್ಯಪ್ರದೇಶದ ಇಂದೋರ್ ನಲ್ಲಿ 1939ರಲ್ಲಿ ರಾಯೀಸ್ ಖಾನ್ ಅವರು ಸಂಗೀತಗಾರರ ಮನೆಯಲ್ಲಿ ಜನಿಸಿದ್ದರು. ರಕ್ತದಲ್ಲೇ ಸಂಗೀತ ಹಾಸು ಹೊಕ್ಕಾಗಿದ್ದರಿಂದ ಸಹಜವಾಗಿಯೇ ರಾಯೀಸ್ ಖಾನ್ ಅವರು ಚಿಕ್ಕ ವಯಸ್ಸಿನಿಂದಲೇ ಸಿತಾರ್ ಅನ್ನು ನುಡಿಸಲು ಶುರು ಮಾಡಿದರು.
1980ರಲ್ಲಿ ಬಿಲ್ಕಿಸ್ ಖಾನಮ್ ರ ಕೈಹಿಡಿದಿದ್ದ ರಾಯೀಸ್ ಖಾನ್ ಬಳಿಕ ಪಾಕಿಸ್ತಾನಕ್ಕೆ ತೆರಳಿದ್ದರು.