ವಿದೇಶ

ಲೈಂಗಿಕ ಕಿರುಕುಳ ಪ್ರಕರಣ: ಯೋಗ ಗುರು ಬಿಕ್ರಮ್ ಚೌಧರಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ

Manjula VN
ಲಾಸ್ ಎಂಜಲೀಸ್: ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಲಹೆಗಾರರಿಗೆ 6.5 ಮಿಲಿಯನ್ ಡಾಲರ್ ಶುಲ್ಕ ನೀಡಲು ವಿಫಲರಾದ ಯೋಗ ಗುರು ಬಿಕ್ರಮ್ ಚೌಧರಿ ಅವರ ವಿರುದ್ಧ ಅಮೆರಿಕದಲ್ಲಿ ಬುಧವಾರ ಬಂಧನ ವಾರೆಂಟ್ ಜಾರಿಯಾಗಿದೆ. 
ಲಾಸ್ ಏಂಜಲೀಸ್ ನ ಉಚ್ಚ ನ್ಯಾಯಾಲಯದ ನ್ಯಾಯಾಧೀಶ (ಸುಪೀರಿಯರ್ ಕೋರ್ಟ್)ರಾದ ಎಡ್ವರ್ಡ್ ಮೊರೆಟನ್ ಅವರು ಈ ಆದೇಶವನ್ನು ನೀಡಿದ್ದಾರೆ. 
ಬಿಕ್ರಮ್ ಚೌಧರಿ ಬಿಕ್ರಮ್ ಯೋಗಾ ಎಂಪಾಯರ್ ಸಂಸ್ಥಾಪಕರಾಗಿದ್ದಾರೆ. ಬಿಕ್ರಮ್ ಚೌಧರಿಯವರ ಕಾನೂನು ಸಲಹೆಗಾರ್ತಿಯಾಗಿದ್ದ ಮೀನಾಕ್ಷಿ ಮಿಕ್ಕಿ ಎಂಬಾಕೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. 
ಯೋಗ ಕಲಿಯಲು ಬರುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಮೇಲೆ ಬಿಕ್ರಮ್ ಚೌಧರಿಯವರು ಅತ್ಯಾಚಾರ ಮಾಡಿದ್ದರೆಂದು ಮಿಕ್ಕಿ ಆರೋಪ ಮಾಡಿದ್ದರು. ಅಲ್ಲದೆ, ವಿಚಾರವನ್ನು ಮುಚ್ಚಿಡಲು ನಿರಾಕರಿಸಿದ್ದಕ್ಕೆ ಬಿಕ್ರಮ್ ಅವರು ತನ್ನನ್ನು ಕೆಲಸದಿಂದ ಕಿತ್ತು ಹಾಕಿದ್ದರು ಎಂದು ಹೇಳಿಕೊಂಡಿದ್ದರು. 
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯ 6.7 ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ಬಿಕ್ರಮ್ ಅವರಿಗೆ ಸೂಚನೆ ನೀಡಿತ್ತು. ಇದಾದ ಬಳಿಕ ಬಿಕ್ರಮ್ ಅವರು ಕ್ಯಾಲಿಫೋರ್ನಿಯಾಗೆ ಪರಾರಿಯಾಗಿದ್ದರು. 
ಪ್ರಸ್ತುತ ಬಿಕ್ರಮ್ ಅವರು ಮೆಕ್ಸಿಕೋದಲ್ಲಿದ್ದು, ಕೂಡಲೇ ಅವರನ್ನು ಬಂಧನಕ್ಕೊಳಪಡಿಸುವಂತೆ ನ್ಯಾಯಾಲಯ ಆದೇಶಿಸಿದೆ. 
SCROLL FOR NEXT