ಟೊಕ್ಯೊ: ಜಪಾನ್ ನ ಹಿರೋಶಿಮಾ ನಗರಕ್ಕೆ ಅಣುಬಾಂಬ್ ಬಿದ್ದಿದೆ ಎಂದು ಮೊದಲ ಬಾರಿಗೆ ಜನರಿಗೆ ಎಚ್ಚರಿಕೆ ನೀಡಿದ್ದ ಬಾಂಬ್ ಸ್ಫೋಟವನ್ನು ಪ್ರತ್ಯಕ್ಷ ಕಂಡ ಮಹಿಳೆ ಯೋಶಿ ಓಕಾ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
1945 ಆಗಸ್ಟ್ 6ರಂದು ಓಕಾ ಅವರಿಗೆ 14 ವರ್ಷವಾಗಿತ್ತು. ಹಿರೊಶಿಮಾದಲ್ಲಿ ಬಾಲಕಿ ಇಂಪೀರಿಯಲ್ ಜಪಾನಿಯರ ಸೇನೆಯ ಭೂಗತ ಆಜ್ಞೆಯ ಕೇಂದ್ರದಲ್ಲಿ ಸಂವಹನ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದಳು.
ಅಣುಬಾಂಬ್ ಬಿದ್ದ ನಂತರ ಈಕೆ ಹಿರೊಶಿಮಾದ ಪೂರ್ವಕ್ಕೆ ಫುಕುಯಾಮಾ ನಗರದಲ್ಲಿ ಮತ್ತೊಂದು ಮಿಲಿಟರಿ ಕೇಂದ್ರವನ್ನು ಓಕಾ ಸಂಪರ್ಕಿಸಿದಳು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಹಿರೋಶಿಮಾ ಸಂಪೂರ್ಣ ನಾಶವಾಗಿ ಹೋಗಿತ್ತು. ಹೊಸ ಮಾದರಿಯ ಬಾಂಬ್ ನ್ನು ನಗರದ ಮೇಲೆ ಸಿಡಿಸಲಾಗಿತ್ತು. ಬಾಂಬ್ ಸ್ಪೋಟ ಮತ್ತು ನಗರದಲ್ಲಿ ಜನರ ಆಮೇಲಿನ ಜನಜೀವನ, ಪರಿಸ್ಥಿತಿಗಳ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದ ಯೋಶಿ ಓಕಾ ಇದೇ ತಿಂಗಳ 19ರಂದು ಮಾರಣಾಂತಿಕ ಲಿಂಫೋಮಾ ಕಾಯಿಲೆಯಿಂದ ಹಿರೊಶಿಮಾದ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos