ಚೀನಾಗೆ ನಡುಕ ಹುಟ್ಟಿಸಿದೆ ಭಾರತವೂ ಇರುವ ಈ 4 ರಾಷ್ಟ್ರಗಳ ಸಭೆ!
ನ.13 ರಂದು ಮನಿಲಾದಲ್ಲಿ ನಡೆಯಲಿರುವ ಈಸ್ಟ್ ಏಷ್ಯಾ ಸಮ್ಮೇಳನದ ಪಾರ್ಶ್ವದಲ್ಲಿ ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ ರಾಷ್ಟ್ರಗಳ ಸಭೆಗೆ ವೇದಿಕೆ ಸಜ್ಜುಗೊಂಡಿದ್ದು, ನೆರೆ ರಾಷ್ಟ್ರ ಚೀನಾಗೆ ಈಗಾಗಲೇ ನಡುಕ...
ಬೀಜಿಂಗ್: ನ.13 ರಂದು ಮನಿಲಾದಲ್ಲಿ ನಡೆಯಲಿರುವ ಈಸ್ಟ್ ಏಷ್ಯಾ ಶೃಂಗಸಭೆ ಪಾರ್ಶ್ವದಲ್ಲಿ ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ ರಾಷ್ಟ್ರಗಳ ಸಭೆಗೆ ವೇದಿಕೆ ಸಜ್ಜುಗೊಂಡಿದ್ದು, ನೆರೆ ರಾಷ್ಟ್ರ ಚೀನಾಗೆ ಈಗಾಗಲೇ ಸಣ್ಣ ನಡುಕ ಪ್ರಾರಂಭವಾಗಿದೆ.
ಸುಮಾರು 10 ವರ್ಷಗಳ ನಂತರ 4 ರಾಷ್ಟ್ರಗಳ ನಡುವೆ ಇಂತಹದ್ದೊಂದು ಸಭೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯೂ ಭಾಗಿಯಾಗುವ ಸಾಧ್ಯತೆಗಳಿವೆ. ಈ ಸಭೆಯ ಬಗ್ಗೆ ಚೀನಾ ಹೇಳಿಕೆ ನೀಡಿದ್ದು, ಮೂರನೇ ರಾಷ್ಟ್ರದ ಹಿತಾಸಕ್ತಿಗಳಿಗೆ ಈ ಸಭೆಯಿಂದ ಧಕ್ಕೆ ಉಂಟಾಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಚೀನಾ ವಿದೇಶಾಂಗ ಇಲಾಖೆ ಹೇಳಿದೆ.
ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ ರಾಷ್ಟ್ರಗಳ ನಡುವಿನ ಸಭೆ ಅಭಿವೃದ್ಧಿ, ಶಾಂತಿ, ಸಹಕಾರಗಳಿಗೆ ಪೂರಕವಾಗಿರಲಿದ್ದು, ಮತ್ತೊಂದು ರಾಷ್ಟ್ರಗಳ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಚೀನಾ ಹೇಳಿದೆ. 4 ರಾಷ್ಟ್ರಗಳ ಸಭೆಯಿಂದಾಗಿ ಚೀನಾಗೆ ಈಗಾಗಲೇ ಸಣ್ಣ ನಡುಕ ಪ್ರಾರಂಭವಾಗಿದೆ ಎಂದು ಚೀನಾದ ಈ ಹೇಳಿಕೆಯನ್ನು ವಿಶ್ಲೇಷಿಸಲಾಗುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.