ವಿದೇಶ

ಅಮೆರಿಕ ಹಾಗೂ ಚೀನಾ ಜೊತೆಯಾದರೆ ವಿಶ್ವದ ಸಮಸ್ಯೆಗಳಿಗೆ ವಿರಾಮ: ಟ್ರಂಪ್

Srinivas Rao BV
ಬೀಜಿಂಗ್: ಅಮೆರಿಕ ಹಾಗೂ ಚೀನಾ ಜೊತೆಯಾದರೆ ವಿಶ್ವದ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 
ಚೀನಾಗೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ, ಹಲವು ದಶಕಗಳ ಯಶಸ್ಸು ಹಾಗೂ ಸ್ನೇಹ ನಮ್ಮ ಸಮಸ್ಯೆಗಳನ್ನಷ್ಟೇ ಅಲ್ಲದೇ, ಜಗತ್ತಿನ ಅನೇಕ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಮೊದಲ ಭೇಟಿಯಲ್ಲಿ ಅಮೆರಿಕ-ಚೀನಾ $250 ಬಿಲಿಯನ್ ಮೊತ್ತದ ಒಪ್ಪಂದಗಳಿಗೆ ಸಹಿ ಹಾಕಿವೆ. 
ದ್ವಿಪಕ್ಷೀಯ ಮಾತುಕತೆಯ ನಂತರ ಸುದ್ದಿಗೋಷ್ಠಿ ನಡೆಸಿರುವ ಡೊನಾಲ್ಡ್ ಟ್ರಂಪ್-ಕ್ಸೀ ಜಿನ್ಪಿಂಗ್, ಸಹಕಾರ ಪಾಲುದಾರಿಕೆಯ ದೃಷ್ಟಿಯಿಂದ ಉಭಯ ರಾಷ್ಟ್ರಗಳೂ ಸಹ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸುವುದಾಗಿ ತಿಳಿಸಿದ್ದಾರೆ. ನಮಗೆ ಚೀನಾದೊಂದಿಗೆ ಅತ್ಯುತ್ತಮ ವಾಣಿಜ್ಯ ಸಂಬಂಧ ಬೇಕಾಗಿದೆ ಹಾಗೂ ಚೀನಾದಿಂದಲೂ ಅದನ್ನೇ ನಿರೀಕ್ಷಿಸುತ್ತೇವೆ. ವಾಣಿಜ್ಯ ವ್ಯಾಪಾರಕ್ಕೆ ಸಂಬಂಧಿಸಿದಂತೆ ಅಮೆರಿಕ-ಚೀನಾ ನಡುವೆ ಇರುವ ಅಸಮತೋಲನವನ್ನೂ ಸಹ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ. 
SCROLL FOR NEXT