ವಿದೇಶ

ಐಸಿಜೆ ಚುನಾವಣೆ: ಭಾರತದ ಅಭ್ಯರ್ಥಿ ದಲ್ವೀರ್ ಭಂಡಾರಿಗೆ ಜಯ

Srinivasamurthy VN
ವಿಶ್ವಸಂಸ್ಥೆ: ಬಹು ನಿರೀಕ್ಷಿತ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಸ್ಥಾನಕ್ಕೆ ಭಾರತದ ಅಭ್ಯರ್ಥಿ ದಲ್ವೀರ್ ಭಂಡಾರಿ ಮರು ಆಯ್ಕೆಯಾಗಿದ್ದಾರೆ.
ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಭಂಡಾರಿ ಹಾಗೂ ಬ್ರಿಟನ್ ನ ಕ್ರಿಸ್ಟೊಫೋರ್ ಗ್ರೀನ್ ವುಡ್ ನಡುವೆ ಪೈಪೋಟಿ ನಡೆಯುತ್ತಿತ್ತಾದರೂ, ಕೊನೆಯ ಕ್ಷಣದಲ್ಲಿ ಬ್ರಿಟನ್  ಅಭ್ಯರ್ಥಿ ಕ್ರಿಸ್ಟೊಫೋರ್ ಗ್ರೀನ್ ವುಡ್ ಸ್ಪರ್ಧೆಯಿಂದ ಹಿಂದೆ ಸರಿದ ಹಿನ್ನಲೆಯಲ್ಲಿ ಭಾರತದ ಅಭ್ಯರ್ಥಿ ದಲ್ವೀರ್ ಭಂಡಾರಿ ಅನಾಯಾಸವಾಗಿ ಜಯಿಸಿದ್ದಾರೆ. ಇನ್ನು ರಷ್ಯಾ, ಅಮೆರಿಕ, ಫ್ರಾನ್ಸ್, ಚೀನಾ ದೇಶಗಳೂ ಕೂಡ ಗ್ರೀನ್ ವುಡ್  ಗೆ ಬೆಂಬಲವಾಗಿ ನಿಂತಿದ್ದವು ಎಂದು ಹೇಳಲಾಗಿದೆ.
ಈ ಹಿಂದೆ ನಡೆದ 11 ಸುತ್ತಿನ ಮತದಾನದಲ್ಲಿ ಬಂಡಾರಿಗೆ ವಿಶ್ವಸಂಸ್ಥೆ ಮಹಾಸಭೆಯ ಮೂರನೇ ಎರಡರಷ್ಟು ಸದಸ್ಯರು ಬೆಂಬಲ ದೊರೆತಿದ್ದು, ಗ್ರೀನ್ ವುಡ್ ಗಿಂತ ಕೇವಲ ಮೂರು ಮತಗಳು ಹಿಂದಿದ್ದರು. ಭಾರತದ ದಲ್ವೀರ್  ಭಂಡಾರಿ ಜನರಲ್ ಅಸೆಂಬ್ಲಿಯಲ್ಲಿ 183-193 ಮತಗಳನ್ನು ಪಡೆದಿದ್ದು, ಭದ್ರತಾ ಮಂಡಳಿಯಲ್ಲಿ 15 ಮತಗಳನ್ನು ಪಡೆದಿದ್ದರು. 
ಚುನಾವಣೆಯಲ್ಲಿ ನಡೆದ ನಾಟಕೀಯ ಬೆಳವಣಿಗೆ ಹಾಗೂ ಬ್ರಿಟನ್ ಅಭ್ಯರ್ಥಿ ಸ್ಪರ್ಧೆಯಿಂದ ಹಿಂದೆ ಸರಿದ ಹಿನ್ನಲೆಯಲ್ಲಿ ದಲ್ವೀರ್ ಭಂಡಾರಿ ಗೆಲುವು ಸುಲಭವಾಯಿತು ಎನ್ನಲಾಗಿದೆ.
SCROLL FOR NEXT