ಶ್ವೇತಭವನ 
ವಿದೇಶ

ಉಗ್ರ ಹಫೀಜ್ ಸಯೀದ್ ಬಿಡುಗಡೆ: ಪಾಕ್ ನಡೆಗೆ ಶ್ವೇತಭವನ ಖಂಡನೆ

ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಾಗೂ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮುಖಂಡ ಹಫೀಜ್ ಸಯೀದ್ ಬಿಡುಗಡೆಗೊಳಿಸಿರುವ ಪಾಕಿಸ್ತಾನ ಸರ್ಕಾರದ ನಡೆಯನ್ನು ಶ್ವೇತಭವನ ಭಾನುವಾರ ತೀವ್ರವಾಗಿ ಖಂಡಿಸಿದೆ...

ವೆಸ್ಟ್ ಪಾಮ್ ಬೀಚ್; ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಾಗೂ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮುಖಂಡ ಹಫೀಜ್ ಸಯೀದ್ ಬಿಡುಗಡೆಗೊಳಿಸಿರುವ ಪಾಕಿಸ್ತಾನ ಸರ್ಕಾರದ ನಡೆಯನ್ನು ಶ್ವೇತಭವನ ಭಾನುವಾರ ತೀವ್ರವಾಗಿ ಖಂಡಿಸಿದೆ. 
ಈ ಕುರಿತಂತೆ ಮತಾನಾಡಿರುವ ಶ್ವೇತಭವನದ ವಕ್ತಾರೆ ಸಾರಾ ಹಕಬೀ ಸ್ಯಾಂಡರ್ಸ್ ಅವರು, ಹಫೀಜ್'ನನ್ನು ಮತ್ತೆ ಬಂಧನಕ್ಕೊಳಪಡಿಸಲು ಪಾಕಿಸ್ತಾನ ನಿರಾಕರಿಸಿದ್ದೇ ಆದರೆ, ಇದು ಅಮೆರಿಕಾ ಹಾಗೂ ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧ ಹಾಗೂ ಪಾಕಿಸ್ತಾನದ ವರ್ಚಸ್ಸಿನ ಮೇಲೆ ಗಂಭೀರ ಪರಿಣಾಮವನ್ನು ಬೀರದಲಿದೆ ಎಂದು ಹೇಳಿದ್ದಾರೆ. 
ಹಫೀಜ್ ಬಿಡುಗಡೆಯನ್ನು ಅಮೆರಿಕಾ ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಹಫೀಜ್ ನನ್ನು ಮತ್ತೆ ಬಂಧನಕ್ಕೊಳಪಡಿಸಿ, ಕೂಡಲೇ ಆತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಈ ಮೂಲಕ ಆಗ್ರಹಿಸುತ್ತೇವೆಂದು. ಹಫೀಜ್ ಬಿಡುಗಡೆ ಬಹುದೊಡ್ಡ ಸಮಸ್ಯೆಯ ಸಂದೇಶವನ್ನು ರವಾನಿಸುತ್ತಿದ್ದು, ಇದು ಭಯೋತ್ಪಾದನೆ ಎದುರಿಸಲು ಪಾಕಿಸ್ತಾನದ ಬದ್ಧತೆಯನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!