ಲಾಸ್ ವೇಗಾಸ್ ನಲ್ಲಿ ಉಗ್ರ ದಾಳಿ
ಲಾಸ್ ಏಂಜಲೀಸ್: ಅಮೆರಿಕದ ಇತಿಹಾಸದಲ್ಲೇ ಅತ್ಯಂಕ ಭೀಕರ ಎನ್ನುವಂಥ ಶೂಟೌಟ್ ಎಂಬ ಕುಖ್ಯಾತಿಗೆ ಕಾರಣವಾಗಿರುವ ಲಾಸ್ ವೇಗಾಸ್ ಶೂಟೌಟ್ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ.
ಮ್ಯಾಂಡಲಾ ಬೇ ಕ್ಯಾಸಿನೋ ಮತ್ತು ಹೋಟೆಲ್‌ನ ಆವರಣದ ಸಮೀಪದಲ್ಲಿ ಆಮೆರಿಕದ ಖ್ಯಾತ ಗಾಯಕ ಜೇಸನ್ ಆಲೆಕ್ಸನ್ ಅವರ 'ರೂಟ್ 91' ಎಂಬ ಮೂರು ದಿನಗಳ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಮಹಡಿ ಮೇಲಿಂದ ದಾಳಿಕೋರನೋರ್ವ ಏಕಾಏಕಿ ಗುಂಡಿನ ಮಳೆಗರೆಯಲಾಭಿಸಿದ. ಆರಂಭದಲ್ಲಿ ಸಂಗೀತ ಶಬ್ದದ ನಡುವೆ ಕೇಳಿ ಬಂದ ಗುಂಡಿನ ಶಬ್ಡವನ್ನು ಗಾಜು ಒಡೆದ ಶಬ್ದ ಎಂದು ಭಾವಿಸಿದರೆ ಮತ್ತೆ ಕೆಲವರು ಅದನ್ನು ಪಟಾಕಿ ಶಬ್ದ ಎಂದು ಭಾವಿಸಿದರು.
ಈ ನಡುವೆ ಹೊಟೆಲ್ ಆವರಣದಲ್ಲಿದ್ದ ಹಲವರು ಗುಂಡೇಟಿನಿಂದ ನೆಲಕ್ಕೆ ಕುಸಿಯುತ್ತಿದ್ದಂತೆಯೇ ಹೊಟೆಲ್ ಆವರಣದಲ್ಲಿದ್ದ ಎಲ್ಲರೂ ದಿಕ್ಕಾಪಾಲಾಗಿ ಓಡಲಾರಂಭಿಸಿದರು. ಈ ವೇಳೆ ಹತ್ಯೆಕೋರ ಸಿಡಿಸಿದ ಗುಂಡಿನ ದಾಳಿಯಿಂದಾಗಿ ಈ ವರೆಗೂ ಸುಮಾರು 60 ಮಂದಿ ಅಸುನೀಗಿದ್ದು, 515ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಪ್ರೇಕ್ಷಕರು ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ. ದಾಳಿಕೋರ ಸುಮಾರು 32 ಸುತ್ತು ಗುಂಡು ಹಾರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ಬಳಿಕ ದಾಳಿ ನಡೆಸಿದ ಐಸಿಸ್ ಉಗ್ರ 64 ವರ್ಷದ ಸ್ಟೀಫನ್ ಪೆಡಾಕ್ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ನಾವು ಹೋಟೆಲ್ ಪ್ರವೇಶಿಸುತ್ತಿದ್ದಂತೆ, ಆತ ಗುಂಡು ಹಾರಿಸಿಕೊಂಡು ಸತ್ತಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ದಾಳಿಕೋರನ ಸಂಗಾತಿ ಮರಿಲೊ ಡಾನ್ಲಿ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆಕೆಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಅವರೆಲ್ಲ ಸಾಯಲಿದ್ದಾರೆ ಎಂದು ಕೂಗಿ ಹೇಳಿದ್ದ ದಾಳಿಕೋರನ ಪತ್ನಿ!
ಗುಂಡು ಹಾರಾಟ ನಡೆಯುವುದಕ್ಕಿಂತ ಸುಮಾರು 45 ನಿಮಿಷಗಳ ಮೊದಲು 50 ವರ್ಷ ವಯಸ್ಸಿನ ಮಹಿಳೆ ಸಂಗೀತ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತನ್ನ ಬಾಯ್‌ಫ್ರೆಂಡ್ ಜತೆ ಬಂದಿದ್ದಳು. "ಅವರೆಲ್ಲ ಇಲ್ಲಿಯೇ ಇದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಮೂರ್ಖರು ಸತ್ತೇ ಹೋಗಲಿದ್ದಾರೆ' ಎಂದು ಆಕೆ ಕಿರುಚಿದ್ದಳು ಎಂದು ಬ್ರೆನ್ನಾ ಹ್ಯಾಂಡ್ರಿಕ್ ಎಂಬುವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆಕೆ ಕಂದು ಬಣ್ಣದ ಕೂದಲು ಹೊಂದಿದ್ದಳೆಂದು ಹ್ಯಾಂಡ್ರಿಕ್ ತಿಳಿಸಿದ್ದಾರೆ. ಅವಳ ವರ್ತನೆಯು ಆಕೆಗೆ ಉಂಟಾಗುವ ದುರಂತದ ಸೂಚನೆ ಇತ್ತು ಎಂಬುದನ್ನು ತಿಳಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸ್ ಮೂಲಗಳು ಪ್ರಕಾರ ಅರವತ್ತು ಮಂದಿಯ ಸಾವಿಗೆ ಕಾರಣನಾಗಿರುವ ಸ್ಟೀಫನ್ ಪೆಡಾಕ್‌ನ ಗೆಳತಿ ಮರಿಲೋ ಡಾನ್ಲ (62)ಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆಕೆಯ ವಿಚಾರಣೆ ನಡೆಸಲಾಗುತ್ತಿದ್ದು, ಏಕಾಏಕಿ ಆತ ಯಾವ ಕಾರಣಕ್ಕೆ ಗುಂಡು ಹಾರಿಸಿದ ಎಂಬ ಬಗ್ಗೆ ಮಾಹಿತಿ ಪಡೆಯಲು ಯತ್ನಿಸಲಾಗುತ್ತಿದೆ. ಇನ್ನು ಬಂಧಿತ ಮಹಿಳೆ ಆಸ್ಟ್ರೇಲಿಯಾಕ್ಕೆ ಸೇರಿದವಳು ಎಂದು ತಿಳಿದುಬಂದಿದ್ದು, ಈ ನಡುವೆ ಅಸುನೀಗಿದ ಹತ್ಯೆಕೋರನ ಸಹೋದರ ಎರಿಕ್ ಮಾತನಾಡಿ ಆತನಿಗೆ ಯಾವುದೇ ಧಾರ್ಮಿಕ ಮತ್ತು ರಾಜಕೀಯ ಸಂಘಟನೆಯ ಸಂಪರ್ಕ ಇರಲಿಲ್ಲ. ಯಾವ ಕಾರಣಕ್ಕಾಗಿ ಆತ ಇಂಥ ಕುಕೃತ್ಯವೆಸಗಿದ ಎಂದು ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.
ಹತ್ಯೆಕೋರನ ಬಳಿ ಇದ್ದವು ಎಂಟು ಗನ್‌ಗಳು
ಹತ್ಯೆಕೋರ ತಂಗಿದ್ದ ಹೋಟೆಲ್‌ನ ಕೊಠಡಿಯೊಳಗೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಕನಿಷ್ಠ ಎಂಟು ಗನ್‌ಗಳು ಸಿಕ್ಕಿವೆ. ಆತ ಹೋಟೆಲ್‌ನ 32 ಮಹಡಿಯಲ್ಲಿ ಕೊಠಡಿಯನ್ನು ಪಡೆದಿದ್ದ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿ ಪೊಲೀಸರ ಗುಂಡಿಗೆ ಬಲಿಯಾದ ಬಳಿಕ ಶೋಧ ಕಾರ್ಯ ನಡೆಸಲಾಗಿದೆ.