ಟೆಲಿಫೋನ್ ವೈರ್ ಹಿಡಿದಿರುವ ವ್ಯಕ್ತಿ
ಬಾಲಿವುಡ್ ನಲ್ಲಿ ಹಿರೋಗಳು ಹಿರೋಯಿಸಂ ತೋರಿಸಲು ಸ್ಟಂಟ್ ಗಳನ್ನು ಮಾಡುವುದು ನೋಡಿರುತ್ತೀರಾ. ಆದರೆ ಇಲ್ಲೊಬ್ಬ ಭೂಪ ಹೋಟೆಲ್ ಬಿಲ್ ಕಟ್ಟುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ವಿಚಿತ್ರ ಸಾಹಸಕ್ಕೆ ಮುಂದಾಗಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದ.
ಚೀನಾದ ವ್ಯಕ್ತಿಯೊಬ್ಬ ಹೋಟೆಲ್ ಬಿಲ್ ಕಟ್ಟುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಾನು ತಂಗಿದ್ದ ಹೋಟೆಲ್ ಗೆ ಅಳವಡಿಸಿದ್ದ ಟೆಲಿಫೋನ್ ವೈರ್ ಅನ್ನು ಹಿಡಿದುಕೊಂಡು ಮತ್ತೊಂದು ಕಟ್ಟಡಕ್ಕೆ ಹೋಗಲು ಮುಂದಾಗಿದ್ದಾನೆ ಇದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ.
ಆತ ಹೋಟೆಲ್ ನ 19ನೇ ಮಹಡಿಯಲ್ಲಿಂದ ಟೆಲಿಫೋನ್ ವೈರ್ ಹಿಡಿದುಕೊಂಡು ಹೊರಬಂದಿದ್ದ. ಆತ ಅರ್ಧಕ್ಕೆ ಬರುತ್ತಿದ್ದಂತೆ ಹಿಂದಕ್ಕೂ ಹೋಗದ ಮುಂದಕ್ಕೂ ಹೋಗದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲಿ ತಪ್ಪಿ ಆತ ಏನು ಮಾಡಲು ತೋಚದೆ ಕೈಯಲ್ಲಿ ಹಿಡಿದಿದ್ದ ಟೆಲಿಫೋನ್ ವೈರ್ ಅನ್ನು ಬಿಟ್ಟಿದ್ದರೆ ಸೀದಾ ಶಿವನ ಪಾದ ಸೇರುತ್ತಿದ್ದ. ಆದರೆ ಭಯಪಡದ ಆತ ಮತ್ತೊಂದು ಕಟ್ಟಡಕ್ಕೆ ಸುರಕ್ಷಿತವಾಗಿ ತಲುಪಿದ ಅಷ್ಟರಲ್ಲಿ ಅಲ್ಲಿಗೆ ಬಂದಿದ್ದ ಅಗ್ನಿಶಾಮಕ ಸಿಬ್ಬಂದಿ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಬಾನಂಗಳದಲ್ಲಿ ಆತ ಮಾಡಿದ ಸಾಹಸವನ್ನು ವ್ಯಕ್ತಿಯೊಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics