ವಿದೇಶ

27 ವರ್ಷದ ಹಿಂದೆ ಪಾಕ್'ಗೆ ಹೋಗಿ ಮತ್ತೆ ತವರಿಗೆ ಮರಳಿದ್ದ ಭಾರತೀಯ ಪ್ರಜೆ ಬಂಧನ

Manjula VN

ಜೈಸಲ್ಮೇರ್: 27 ವರ್ಷಗಳ ಹಿಂದೆ ಗಡಿ ದಾಟಿ ಪಾಕಿಸ್ತಾನ ಪ್ರವೇಶಿಸಿದ್ದ 55 ವರ್ಷದ ವ್ಯಕ್ತಿಯೊಬ್ಬ ಕಾನೂನುಬಾಹಿರವಾಗಿ ಮತ್ತೆ ಭಾರತಕ್ಕೆ ಮರಳಿದ್ದಾತನನ್ನು ಗುಪ್ತಚರ ದಳದ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆಂದು ಮಂಗವಾರ ತಿಳಿದುಬಂದಿದೆ. 

ಹಸನ್ ಖಾನ್ ಎಂಬ ವ್ಯಕ್ತಿ 27 ವರ್ಷಗಳ ಹಿಂದೆ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದಾನೆ. 6 ತಿಂಗಳ ಹಿಂದಷ್ಟೇ ಮತ್ತೆ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾನೆ. 

ಕಾನೂನು ಬಾಹಿರವಾಗಿ ಭಾರತ ಪ್ರವೇಶಿಸಿದ್ದ ಹಸನ್ ಖಾನ್ ಇಷ್ಟು ತಿಂಗಳೂ ಅಧಿಕಾರಿಗಳ ಕಣ್ಣು ತಪ್ಪಿಸಿ ಗುಜರಾತ್ ಹಾಗೂ ಮಹಾರಾಷ್ಟ್ರದ ವಿವಿಧೆಡೆಗಳಲ್ಲಿ ಅಗಡಿಕೊಂಡಿದ್ದ. ಇದೀಗ ಗುಪ್ತಚರ ಅಧಿಕಾರಿಗಳು ಹಸನ್ ಖಾನ್'ನನ್ನು ಬಂಧನಕ್ಕೊಳಪಡಿಸಿದ್ದಾರೆ. 

1990ರಲ್ಲಿ ಭಾರತ-ಪಾಕಿಸ್ತಾನ ಗಡಿ ದಾಟಲು ಹಸನ್ ಕಾನೂನು ಬಾಹಿರ ಏಜೆಂಟ್ ಗಳಿಗೆ 5,000 ಪಾಕಿಸ್ತಾನ ಹಣವನ್ನು ಕೊಟ್ಟಿದ್ದ. ಪಾಕಿಸ್ತಾನದ ಅಮರ್ ಕೋಟ್ ಜಿಲ್ಲೆಯಲ್ಲಿನ ಖರಾಡೋ ಎಂಬ ಗ್ರಾಮದಲ್ಲಿರುವ ಅನಾರೋಗ್ಯ ಪೀಡಿತನಾಗಿರುವ ತನ್ನ ಸಹೋದರನ್ನು ಕಾಣರು ಆತ ಪಾಕಿಸ್ತಾನಕ್ಕೆ ಹೋಗಿದ್ದ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಹಸನ್ ನನ್ನು ಬಂಧನಕ್ಕೊಳಪಡಿಸಿರುವ ರಾ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆಂದು ತಿಳಿದುಬಂದಿದೆ. 
SCROLL FOR NEXT