ವಾಷಿಂಗ್ ಟನ್: ಅಮೆರಿಕಾದ ಮಾಜಿ ಅಧ್ಯಕ್ಷ ಜಾನ್ ಎಫ್.ಕೆನಡಿ ಅವರ ಹತ್ಯೆಗೆ ಸಂಬಂಧಿಸಿದ ರಹಸ್ಯೆ ಕಡತಗಳನ್ನು ಬಿಡುಗಡೆ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
1963 ರ ನವೆಂಬರ್ 22 ರಂದು ಜಾನ್ ಎಫ್ ಕೆನಡಿ ಹತ್ಯೆ ನಡೆದಿತ್ತು. ಆಗುಂತಕ ಲೀ ಹಾರ್ವೆ ಓಸ್ವಾಲ್ಡ್‌ನ ಗುಂಡೇಟಿನಿಂದ ಕೆನಡಿ ಹತರಾದರು ಎಂಬ ತನಿಖಾ ಆಯೋಗದ ವರದಿಯನ್ನು ಪ್ರಶ್ನಿಸುವ ಅನೇಕ ಥಿಯರಿಗಳಿದ್ದು, ಈ ಹಿನ್ನೆಲೆಯಲ್ಲಿ ರಹಸ್ಯ ಕಡತಗಳ ಬಿಡುಗಡೆ ಮಹತ್ವ ಪಡೆದುಕೊಂಡಿದೆ.
"ಹಲವು ವರ್ಷಗಳಿಂದ ನಿರ್ಬಂಧಿಸಲಾಗಿರುವ ಜಾನ್ ಎಫ್.ಕೆನಡಿ ಅವರ ಹತ್ಯೆಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ಬಿಡುಗಡೆ ಮಾಡಲು ಅನುಮತಿ ನೀಡಲಾಗುತ್ತದೆ" ಎಂದು ಟ್ರಂಪ್ ಹೇಳಿದ್ದಾರೆ. ಕೆನಡಿ ಅವರ ಹತ್ಯೆಯಾದ 54 ವರ್ಷಗಳ ನಂತರ ರಹಸ್ಯ ಕಡತಗಳು ಬಿಡುಗಡೆಯಾಗುತ್ತಿವೆ.