ಜಿನೇವಾ: ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ನ ಸದ್ಭಾವನಾ ರಾಯಭಾರಿ ಸ್ಥಾನದಿಂದ ವಜಾಗೊಂಡಿದ್ದಾರೆ.
ಮುಗಾಬೆ ಜಿಂಬಾಬ್ವೆ ಅಧ್ಯಕ್ಷ ಮತ್ತು ಪ್ರಧಾನಮಂತ್ರಿಯಾಗಿದ್ದಾಗ ದೇಶದ ಆರ್ಥಿಕ ಸ್ಥಿತಿಯನ್ನು ಕೆಡಿಸಿದ್ದಲ್ಲದೆ ಮಾನವ ಹಕ್ಕುಗಳ ಉಲ್ಲಂಗನೆ ಮಾಡಿದ್ದಾರೆ ಎಂದು ಅಮೆರಿಕ, ಬ್ರಿಟನ್ ಸೇರಿದಂತೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ಆರೋಪಿಸಿದ್ದವು. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಸದ್ಭಾವನಾ ರಾಯಭಾರಿ ಸ್ಥಾನದಿಂದ ಮುಗಾಬೆ ಅವರನ್ನು ವಜಾಗೊಳಿಸಿ ಅದೇಶ ಹೊರಡಿಸಿದೆ.
ಸದ್ಭಾವನಾ ರಾಯಭಾರಿಯಾಗಿ ಮುಗಾಬೆ ಅವರ ನೇಮಕ ತಪ್ಪೆಂದು ಪಾಶ್ಚಾತ್ಯ ರಾಷ್ಟ್ರಗಳು ಟೀಕಿಸಿದ್ದವು. ಅವರಿಂದಾಗಿ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಕಾರ್ಯಗಳು ತನ್ನ ವರ್ಚಸ್ಸು ಕಳೆದುಕೊಳ್ಳಬಹುದು ಎಂದು ಆತಂಕ ವ್ಯಕ್ತಪಡಿಸಿದ್ದವು.
ಕಳೆದ ಬುಧವಾರ ಉರುಗ್ವೆಯಲ್ಲಿ ನಡೆದ ಸಮಾವೇಶದಲ್ಲಿ ಡಬ್ಲ್ಯುಎಚ್‍ಒ ಮಹಾ ನಿರ್ದೇಶಕ ಟೆಡ್ರೊಸ್ ಗೆಬ್ರೆಯೂಸೆಸ್, ಮುಗಾಬೆ ಅವರನ್ನು ಡಬ್ಲ್ಯುಎಚ್‍ಒ ಸದ್ಭಾವನಾ ರಾಯಭಾರಿಯಾಗಿ ಘೋಷಿಸಿದ್ದರು